ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

ಸುಬ್ರಹ್ಮಣ್ಯ: ಸಾಕು ನಾಯಿಯನ್ನು ಚಿರತೆಯೊಂದು ತಡರಾತ್ರಿ ದಾಳಿ ನಡೆಸಿ ಹೊತ್ತೊಯ್ದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಗ್ರಾಮದ ಕೈಕಂಬ ಬಳಿಯ ವೆಂಕಟಪುರ ಲೀಲಾವತಿ ದೇವರಾಜ್ ಅವರ ಮನೆಯ ಸಾಕು ನಾಯಿಯನ್ನು ತಡರಾತ್ರಿ ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ.

ಮನೆಯ ಎರಡು ಸಾಕು ನಾಯಿಗಳು ಮನೆಯ ಗೇಟ್ ಬಳಿಯಿದ್ದ ವೇಳೆ ಚಿರತೆ ದಾಳಿ ನಡೆಸಿ ಒಂದು ನಾಯಿಯನ್ನು ಹೊತ್ತೊಯ್ದಿದೆ. ನಾಯಿಯ ಕೂಗಾಟ ಕೇಳಿ ಕೆಲಸದಾಳು ಎಚ್ಚರಗೊಂಡಿದ್ದು, ಕೆಲಸದಾಳುವಿನ ಎದುರಲ್ಲೇ ಚಿರತೆ ನಾಯಿ ಮೇಲೆ ದಾಳಿ ನಡೆಸಿರುವುದು ಮನೆಯಲ್ಲಿ ಅಳವಡಿಸಲಾದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಚಿರತೆ ಹಾವಳಿ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಜಾಗೃತೆ ವಹಿಸುವಂತೆ ತಿಳಿಸಲಾಗಿದೆ. ಅಲ್ಲದೇ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.

Leave a Reply

You May Have Missed

error: Content is protected !!