ಗೋಳಿತ್ತೊಟ್ಟು : ಮೀನು ಸಾಗಾಟದ ಲಾರಿ ಮತ್ತು ಬೈಕ್ ಡಿಕ್ಕಿ ,ಬೈಕ್ ಸವಾರ ಸ್ಥಳದಲ್ಲೇ ಸಾವು ,ಇನ್ನೋರ್ವ ಗಂಭೀರ

ಗೋಳಿತ್ತೊಟ್ಟು : ಮೀನು ಸಾಗಾಟದ ಲಾರಿ ಮತ್ತು ಬೈಕ್ ಡಿಕ್ಕಿ ,ಬೈಕ್ ಸವಾರ ಸ್ಥಳದಲ್ಲೇ ಸಾವು ,ಇನ್ನೋರ್ವ ಗಂಭೀರ

ನೇಸರ 19 :ಮೀನು ಸಾಗಾಟದ ಟೆಂಪೋ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಸಮೀಪದ ಸನ್ನಂಪಾಡಿಯಲ್ಲಿ ನಡೆದಿದೆ. ಮೃತ ಸವಾರ ಮಂಗಳೂರು ಸಮೀಪದ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29ವ.) ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆಯ ಮೇಲೆ ಮೀನು ಸಾಗಾಟದ ಟೆಂಪೋ ಹರಿದಿದ್ದು, ಘಟನೆಯಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!