ರಾಜಕಾರಣದಿಂದ ದೂರ ಸರಿಯುವ ಬೇಸರ ಹೊರ ಹಾಕಿದ ಎಸ್. ಅಂಗಾರ

ರಾಜಕಾರಣದಿಂದ ದೂರ ಸರಿಯುವ ಬೇಸರ ಹೊರ ಹಾಕಿದ ಎಸ್. ಅಂಗಾರ

ಸುಳ್ಯ: ಸುಳ್ಯದ ಶಾಸಕ, ಸಚಿವ ಎಸ್. ಅಂಗಾರ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಸದ್ಯದ ಬೆಳವಣಿಗೆಯಲ್ಲಿ ರಾಜಕಾರಣದಿಂದ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಂದು ಎಸ್.ಅಂಗಾರ ಅವರು ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದರು.

ಸದ್ಯದ ಬೆಳವಣಿಗೆ ಕಾರ್ಯಕರ್ತರಲ್ಲಿ ಸಂಶಯ ತರಿಸಿದೆ. ಯಾರ ಮೇಲೆ ವಿಶ್ವಾಸ ಇಡಬೇಕು ಎನ್ನುವಂತಾಗಿದೆ. ಲಾಬಿ ಮಾಡಿದವರಿಗೆ ಸೀಟು, ಲಾಬಿ ಮಾಡದವರಿಗೆ ಸೀಟು ಇಲ್ಲ ಎಂಬಂತಾಗಿದೆ. ನಾನು ಪಕ್ಷ, ಪಕ್ಷದ ನಾಯಕರನ್ನು ದೂರುವುದಿಲ್ಲ. ನನ್ನ ನಡೆಯೇ ನನಗೆ ಮುಳ್ಳಾಯಿತು. ಇಲ್ಲಿಗೆ ರಾಜಕೀಯ ಸಾಕು ಎಂದು ತಮ್ಮ ಬೇಸರ ಹೊರ ಹಾಕಿದರು.

Leave a Reply

You May Have Missed

error: Content is protected !!