ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಬಾವಿಗೆ ಬಿದ್ದು ಮೃತ್ಯು




ಪುದುವೆಟ್ಟು : ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನ ಮಹಿಳೆಯೊಬ್ಬರು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ಎಂಬಲ್ಲಿ ತನ್ನ ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎ.10ರಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಉದ್ದದಪಳಿಕೆ ನಿವಾಸಿ ಪುರುಷೋತ್ತಮ ಅವರ ಪತ್ನಿ ಪುಣ್ಯಶ್ರೀ ಮೃತಪಟ್ಟವರಾಗಿದ್ದಾರೆ. ಪುಣ್ಯಶ್ರೀ ಅವರನ್ನು 2017ರಲ್ಲಿ ಪುರುಷೋತ್ತಮ ಅವರು ವಿವಾಹವಾಗಿದ್ದು, ಇವರಿಗೆ 5 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ.

ಪುಣ್ಯಶ್ರೀಯವರು ತನ್ನ ಇಬ್ಬರು ಮಕ್ಕಳೊಂದಿಗೆ ಎ.4 ರಂದು ತವರು ಮನೆ ಗುಮ್ಮಟಗದ್ದೆಗೆ ಬಂದಿದ್ದರು, ಬಳಿಕ ಅಲ್ಲಿಯೇ ಇದ್ದ ಅವರು. ಎ.10 ರಂದು ಮಧ್ಯಾಹ್ನ ಪುರುಷೋತ್ತಮರವರು ಪುಣ್ಯಶ್ರೀಯವರಿಗೆ ಮೊಬೈಲ್ ಕರೆ ಮಾತನಾಡಿದ್ದರು. ಸಂಜೆ ಪುಣ್ಯಶ್ರೀಯವರು ತನ್ನ ಗಂಡ ಪುರುಷೋತ್ತಮ ಅವರಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಅದೇ ದಿನ ರಾತ್ರಿ 10.24 ಗಂಟೆಗೆ ಪುರುಷೋತ್ತಮ ಅವರಿಗೆ ಪುಣ್ಯಶ್ರೀಯ ಚಿಕ್ಕಮ್ಮ ಲತಾ ಎಂಬವರು ಕರೆ ಮಾಡಿ, ರಾತ್ರಿ ಸುಮಾರು 10.00 ಗಂಟೆಯ ವೇಳೆಗೆ ಪುಣ್ಶಶ್ರೀಯು ತಮ್ಮ ಮನೆಯ ಬಳಿಗೆ ಬಂದು ತಾನು ಸಾಯುವುದಾಗಿ ಹೇಳಿ ಏಕಾಏಕಿ ನಮ್ಮ ಮನೆಯ ಬಾವಿಗೆ ಹಾರಿರುವುದಾಗಿ ಮಾಹಿತಿ ನೀಡಿದ್ದರು. ಅದರಂತೆ ಪುರುಷೋತ್ತಮ ಅವರು ಪುದುವೆಟ್ಟಿನ ಮನೆಯಿಂದ ಗುಮ್ಮಟಗದ್ದೆಗೆ ಬಂದಾಗ ಪುಣ್ಶಶ್ರೀಯನ್ನು ಬಾವಿಯ ನೀರಿನಿಂದ ಮೇಲಕ್ಕೆತ್ತಿದ್ದು, ಬಳಿಕ ಪುಣ್ಶಶ್ರೀ ಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಪುಣ್ಯಶ್ರೀಯು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 09/2023 ಕಲಂ: 174 (3) (iv) ಸಿ ಆರ್ ಪಿ ಸಿ. ಯಂತೆ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.














Leave a Reply