ಭೀಕರ ರಸ್ತೆ ಅಪಘಾತ – ಕಾರು ತಲೆಯ ಮೇಲೆ ಹರಿದು ಬಾಲಕ ಸ್ಥಳದಲ್ಲಿ ಮೃತ್ಯು

ಭೀಕರ ರಸ್ತೆ ಅಪಘಾತ – ಕಾರು ತಲೆಯ ಮೇಲೆ ಹರಿದು ಬಾಲಕ ಸ್ಥಳದಲ್ಲಿ ಮೃತ್ಯು

ಮಂಗಳೂರು: ಬಾಲಕನೊರ್ವ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಇಂದು (ಎ.22) ಸೂರಿಂಜೆ ಎಂಬಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಮಹಮ್ಮದ್ ಮುಸ್ಲಿಯಾರ್ ರ ಮಗ (16) ಎಂದು ಗುರುತಿಸಲಾಗಿದೆ.
ಈದುಲ್ ಫಿತ್ರ್ ಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಸಂಜೆ ತನ್ನ ಗೆಳೆಯನ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್ ಆಗಿ, ಆ ವೇಳೆ ಬಾಲಕ ರಸ್ತೆಗೆಸೆಯಲ್ಪಟ್ಟಿದ್ದು, ಅದೇ ಸಮಯದಲ್ಲಿ ಹಿಂಬದಿಯಿಂದ ಬಂದ ಕಾರು ಆತನ ತಲೆಯ ಮೇಲೆ ಹರಿದು ಬಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಕೂಟರ್ ನಲ್ಲಿದ್ದ ಸಹಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಘಟನೆಯ ಭೀಕರತೆಯಿಂದ ಶಾಕ್ ಗೊಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!