ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

ಖ್ಯಾತ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಇಂದು(ಎ.22)ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಶಿಲ್ಪಾ ಶೆಟ್ಟಿ ಕುಟುಂಬದವರನ್ನು ದೇವಳದ ವತಿಯಿಂದ ಬರಮಾಡಿ ಕೊಂಡು ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಬಳಿಕ ಯಕ್ಷಗಾನವನ್ನು ವೀಕ್ಷಿಸಿದ ಶಿಲ್ಪಾ ಶೆಟ್ಟಿ ಕಲೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು
ಶಿಲ್ಪಾ ಶೆಟ್ಟಿ ಅವರ ಜೊತೆ ಪತಿ ರಾಜ್ ಕುಂದ್ರಾ, ತಂಗಿ ಶಮಿತಾ ಶೆಟ್ಟಿ ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ದೇವಳದ ಆಡಳಿತ ಮುಕ್ತೇಸರ ವಾಸುದೇವ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ಹರಿನಾರಾಯಣ ದಾಸ ಅಸ್ರಣ್ಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!