ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ

ಸುಳ್ಯ: ತಾಲೂಕಿನ ಅಮರಪಟ್ನೂರು ಗ್ರಾಮದ ಚೂಂತಾರು ಎಂಬಲ್ಲಿ ಶನಿವಾರ ಮಧ್ಯಾಹ್ನ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಿಡಿ ಉಂಟಾಗಿ ರಸ್ತೆ ಬದಿಯ ತರಗೆಲೆ ಮೇಲೆ ಬಿದ್ದು ರಸ್ತೆ ಬದಿಗೆ ಹಾಗೂ ಹತ್ತಿರದ ಖಾಸಗಿ ಜಮೀನಿಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳೀಯ ನಾಗರಿಕರು ಸೇರಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲು ಪ್ರಯತ್ನಿಸಿದರು. ಸುಳ್ಯ ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು.

Leave a Reply

You May Have Missed

error: Content is protected !!