ಭೀಕರ ಸರಣಿ ಅಪಘಾತ; ಓರ್ವ ಸ್ಥಳದಲ್ಲೇ ಸಾವು

ಭೀಕರ ಸರಣಿ ಅಪಘಾತ; ಓರ್ವ ಸ್ಥಳದಲ್ಲೇ ಸಾವು

ಕುಂಭಾಶಿ (ಉಡುಪಿ) : ಇಲ್ಲಿ ಭಾನುವಾರ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಹೀಂದ್ರಾ ಥಾರ್ ವಾಹನ, ಸೈಕಲ್, ಸ್ಕೂಟರ್, ಬೈಕ್ ಸಹಿತ ಸರಣಿ ಅಪಘಾತ ಸಂಭವಿಸಿದೆ. ಮಹೀಂದ್ರಾ ಥಾರ್ ವಾಹನ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಅಪಘಾತ ದೃಶ್ಯಾವಳಿಗಳು ಸಮೀಪದ ಶ್ರೀ ಚಂಡಿಕಾ ದೇಗುಲದಲ್ಲಿನ ಸಿಸಿ‌ ಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳುವಂತಿದೆ.

ತೆಕ್ಕಟ್ಟೆ ದಿನಸಿ ವ್ಯಾಪಾರಿ ನಾಗರಾಜ ದೇವಾಡಿಗ (40) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು, ಸೈಕಲ್ ಸವಾರ ಕುಂಭಾಶಿ ನಿವಾಸಿ ಕೃಷ್ಣ ದೇವಾಡಿಗ ಅವರು ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!