ಕಾಡಾನೆ ದಾಳಿಗೆ ನಲುಗಿದ ಇಚ್ಲಂಪಾಡಿಯ ಬಡ ಕೃಷಿಕರು
ಇಚ್ಲಂಪಾಡಿಯ ಜನತೆ ಇತ್ತೀಚೆಗೆ ಕಾಡಾನೆಗಳ ದಾಳಿಯಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ತಲೆದೋರಿದೆ.

ಮೊನ್ನೆ ದಿನ ತಮ್ಮಯ್ಯ ಗೌಡ ಬರೆಮೇಲು ಅವರ ತೋಟಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿಯ ಬೆಳೆ ಹಾನಿಗೊಳಿಸಿದ್ದಲ್ಲದೆ ಅವರ ಪಂಪ್ ಸೆಟ್ ಸಹಿತ ಪುಡಿಗೈದಿದೆ. ಇದೀಗ ಕಳೆದ ರಾತ್ರಿ ರೋಯ್ ಟಿ ಕೆ ಕಲ್ಲರ್ಬ, ಪ್ರವೀಣ್ ಕುಮಾರ್ ಕುಂಙಿಮಾರ್ , ಗುಂಡಿಕಂಡ ಜೋಸ್,ಜೋರ್ಜ್ ,ಫಿಲಿಪ್ ಅವರ ತೋಟವನ್ನು ಧ್ವಂಸ ಗೊಳಿಸಿದೆ. ಅರಣ್ಯ ಇಲಾಖೆ ಕೂಡಲೇ ಈ ಪುಂಡಾನೆಗಳನ್ನು ಹಿಡಿದು ತೆರವು ಗೊಳಿಸಬೇಕೆಂದು ಕೃಷಿಕರು ಒಕ್ಕೊರಳಿನ ಆಗ್ರಹ ಮಾಡಿದ್ದಾರೆ. ಮನವಿಗೆ ಸ್ಪಂದಿಸದೆ ಹೋದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
Photos





































Leave a Reply