ಗೋಳಿತಟ್ಟು ಉ ಹಿ ಪ್ರಾ ಶಾಲೆಯಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಚೆಸ್ ಪಂದ್ಯಾಟ

ಗೋಳಿತಟ್ಟು ಉ ಹಿ ಪ್ರಾ ಶಾಲೆಯಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಚೆಸ್ ಪಂದ್ಯಾಟ

ದಿನಾಂಕ 24-07-2023 ಸೋಮವಾರ ಗೋಳಿತಟ್ಟು ಉ ಹಿ ಪ್ರಾ ಶಾಲೆಯಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಚೆಸ್ ಪಂದ್ಯಾಟ ನಡೆಯಿತು. ಬಜತ್ತೂರು, ನೆಲ್ಯಾಡಿ, ಉಪ್ಪಿನಂಗಡಿ ಈ ಮೂರು ಕ್ಲಸ್ಟರ್ ನಿಂದ ಒಟ್ಟು 103 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಗೋಪಾಲ ಗೌಡ ಸರ್ವರನ್ನೂ ಸ್ವಾಗತಿಸಿದರು. ನಿವೃತ್ತ ದೈ.ಶಿ.ಶಿಕ್ಷಕ ಶ್ರೀ ಉಲಹನ್ನನ್ ಪಿ. ಎಂ. ಪಂದ್ಯಾಟವನ್ನು ಉದ್ಘಾಟಿಸಿ ಚೆಸ್ ಆಟದ ಮಾಹಿತಿ ಮತ್ತು ನಿಯಮಗಳನ್ನು ತಿಳಿಸಿದರು. ಬಜತ್ತೂರು ಕ್ಲಸ್ಟರಿನ ಸಿ ಆರ್ ಪಿ ಮಂಜುನಾಥ ಕೆ.ವಿ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಳಾಲು ಪ್ರೌಡ ಶಾಲಾ ಮುಖ್ಯ ಶಿಕ್ಷಕ ಚಕ್ರಪಾಣಿ ಬಾಕಿಲ ಚೆಸ್ ಪಂದ್ಯಾಟದ ವಿವರ ನೀಡಿದರು.ಕ.ರಾ.ಪ್ರಾ.ಶಾ .ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ಆಟಗಾರರಿಗೆ ಶುಭ ಕೋರಿದರು. ಗೋಳಿತಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಬಾಬು ಪೂಜಾರಿ ಅಧ್ಯಕ್ಷ ಸ್ಥಾನ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಶೀನಪ್ಪ ನಾಯ್ಕ ಎಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಬಿ ಎಂ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಅಬ್ದುಲ್ ಲತೀಫ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಜೋನ್ ಕೆ. ಪಿ. , ಶ್ರೀಮತಿ ತೇಜಸ್ವಿ ಕೆ, ಶ್ರೀಮತಿ ಯಶಸ್ವಿನಿ, ಅಚ್ಚುಕಟ್ಟಾಗಿ ಸಹಕರಿಸಿದರು.

 

Leave a Reply

You May Have Missed

error: Content is protected !!