ನೆಲ್ಯಾಡಿ: ಶ್ರೀ ಮಂಜುನಾಥ ಜ್ಯೋತಿಷ್ಯಾಲಯ ಶುಭಾರಂಭ

ನೆಲ್ಯಾಡಿ: ಶ್ರೀ ಮಂಜುನಾಥ ಜ್ಯೋತಿಷ್ಯಾಲಯ ಶುಭಾರಂಭ

ನೇಸರ ಜ.23:ನೆಲ್ಯಾಡಿಯ ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿಇಂದು ನೂತನವಾಗಿ ಶ್ರೀ ಮಂಜುನಾಥ ಜ್ಯೋತಿಷ್ಯಾಲಯವನ್ನು ವೇ.ಮೂ.ಸೀತಾರಾಮ ಯಡಪಾಡಿತ್ತಾಯ ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಸುಬ್ರಹ್ಮಣ್ಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಸಂಸ್ಥೆಗೆ ಶುಭವನ್ನು ಹಾರೈಸಿದರು
ಗೌರವ ಉಪಸ್ಥಿತಿ ಸ್ಥಾನದಿಂದ ವೇ.ಮೂ.ಸತ್ಯಪ್ರಿಯ ಕಲ್ಲೂರಾಯ,ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಸೌತಡ್ಕ,ಮಾತನಾಡಿ ಕತ್ತಲೆಯಲ್ಲಿರುವ ವಸ್ತುಗಳು ಯಾವ ರೀತಿ ಕಾಣುವುದಿಲ್ಲವೋ ಅದೇ ರೀತಿ ಮನಸ್ಸಿಗೆ ಬಂದಂತಹ ಅಜ್ಞಾನವನ್ನು ಜ್ಯೋತಿಷ್ಯಶಾಸ್ತ್ರದ ಮುಖೇನ ಅದನ್ನು ತಿಳಿದುಕೊಳ್ಳಬಹುದು,ಜ್ಯೋತಿಷ್ಯದಲ್ಲಿ ಸತ್ಯದ ರಾಶಿಗಳು ಇವೆ,ಜ್ಯೋತಿಷ್ಯಶಾಸ್ತ್ರ ಎಂಬುವುದು ವೇದ ಕಾಲದಿಂದಲೇ ಬಂದಂತಹ ಒಂದು ಜ್ಞಾನವಾಗಿದೆ ಎಂದರು,ಸಂಸ್ಥೆಗೆ ಶುಭವನ್ನು ಹಾರೈಸಿದರು.

ಸದಾನಂದ ಕುಂದರ್,ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ,ಭಾಸ್ಕರ.ಯಸ್. ಗೌಡ,ಅಧ್ಯಕ್ಷರು ಪಿ ಎಲ್ ಡಿ ಬ್ಯಾಂಕ್ ಪುತ್ತೂರು,ರವಿ ಪ್ರಸಾದ್ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತು ನೆಲ್ಯಾಡಿ,ಶ್ರೀಮತಿ ಉಷಾ ಅಂಚನ್,ಮಾಜಿ ಸದಸ್ಯರು ತಾಲ್ಲೂಕು ಪಂಚಾಯತು ನೆಲ್ಯಾಡಿ, ಶಿವಪ್ರಸಾದ್ ಬೀದಿ ಮಜಲು,ಗ್ರಾಮ ಪಂಚಾಯತು ನೆಲ್ಯಾಡಿ ಸಂದರ್ಭೋಚಿತವಾಗಿ ಮಾತನಾಡಿ ಸಂಸ್ಥೆಗೆ ಹಾಗೂ ಸಂಸ್ಥೆಯ ಮಾಲಕರಿಗೆ ಶುಭವನ್ನು ಹಾರೈಸಿದರು. ವೇ.ಮೂ.ಶ್ರೀಧರ ನೂಜಿನ್ನಾಯ, ಪ್ರಧಾನ ಅರ್ಚಕರು ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಹಾರ್ಪಳ,ಸುಬ್ರಹ್ಮಣ್ಯ ಆಚಾರ್ಯ,ಹಿರಿಯ ಉದ್ಯಮಿಗಳು ನೆಲ್ಯಾಡಿ, ವೇ.ಮೂ.ರಮಾನಂದ ಭಟ್,ಪ್ರಧಾನ ಅರ್ಚಕರು ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ,ಸುಬ್ರಮಣ್ಯ ಉಪ್ಪಾರ್ಣ, ಮಾಲಕರು ಶ್ರೀನಿಧಿ ಕಾಂಪ್ಲೆಕ್ಸ್ ನೆಲ್ಯಾಡಿ, ಸುಬ್ರಹ್ಮಣ್ಯ ಶಬರಾಯ, ಮಾಜಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಸೌತಡ್ಕ,ಸಂಸ್ಥೆಯ ಮಾಲಕರ ಮಾತೃಶ್ರೀ ಪ್ರಪುಲ್ಲ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಹಾಗೂ ನಿರೂಪಣೆಯನ್ನು ಸುರೇಶ್ ಪಡಿಪಂಡ ನೆರವೇರಿಸಿದರು.ಸಂಸ್ಥೆಯ ಮಾಲಕ ಶಿವಪ್ರಸಾದ್ ಶರ್ಮ ಜ್ಯೋತಿಷ್ಯರು ಧನ್ಯವಾದ ಸಮರ್ಪಿಸಿದರು.

ಜಾಹೀರಾತು

Leave a Reply

You May Have Missed

error: Content is protected !!