ಮಹೇಶ್ ಮೋಟರ್ರ್ಸ್‌ ಮಾಲಕ ಪ್ರಕಾಶ್ ಶೇಖ ಆತ್ಮಹತ್ಯೆ

ಮಹೇಶ್ ಮೋಟರ್ರ್ಸ್‌ ಮಾಲಕ ಪ್ರಕಾಶ್ ಶೇಖ ಆತ್ಮಹತ್ಯೆ

ಮಂಗಳೂರಿನ ಮಹೇಶ್‌ ಮೋಟರ್ರ್ಸ್‌ ನ ಮಾಲಕ ಪ್ರಕಾಶ್‌ ಶೇಖ(48) ಅವರು ಕದ್ರಿಕಂಬಳದ ತಮ್ಮ ಫ್ಲ್ಯಾಟ್‌ನಲ್ಲಿ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖ್ಯಾತ ಸಾರಿಗೆ ಉದ್ಯಮಿ, ಬಸ್‌ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ ಅವರ ಪುತ್ರರಾಗಿರುವ ಪ್ರಕಾಶ್‌ ಅವರು, ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು.

ಫ್ಲ್ಯಾಟ್‌ನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದ ಅವರು ರವಿವಾರ ಬೆಳಗ್ಗೆ ತನ್ನ ರೂಮ್‌ಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೂ ಹೊರಗೆ ಬಂದಿರಲಿಲ್ಲ. ಪತ್ನಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್‌ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!