ವಿದ್ಯುತ್ ಕಂಬದ ಮೇಲೆ ಬಿದ್ದ ಮರ: ಶೌರ್ಯ ತಂಡದಿಂದ ತೆರವು

ವಿದ್ಯುತ್ ಕಂಬದ ಮೇಲೆ ಬಿದ್ದ ಮರ: ಶೌರ್ಯ ತಂಡದಿಂದ ತೆರವು

ಶನಿವಾರ ಸಂಜೆ ಸುರಿದ ಬಾರೀ ಮಳೆಗೆ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಉರುಳಿ ಕೆಲ ಸಮಯ ವಿದ್ಯುತ್ ವ್ಯತ್ಯಯ ಉಂಟಾದ ಘಟನೆ ನಿಡ್ಲೆಯಿಂದ ಪಟ್ರಮೆಗೆ ಸಂಪರ್ಕಿಸುವ ರಸ್ತೆಯ ಸುರ್ಯತ್ತಾವು ಸಮೀಪ ಸಂಭವಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಕಳೆಂಜ ಶೌರ್ಯ ತಂಡದ ಸ್ವಯಂಸೇವಕರು ಮರವನ್ನು ತೆರವುಗೊಳಿಸಿ ಮೆಸ್ಕಾಂ ಇಲಾಖೆಗೆ ಸಹಕರಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು.

ಕಾರ್ಯಾಚರಣೆಯಲ್ಲಿ ಕಳೆಂಜ ವಲಯದ ಸಂಯೋಜಕ ಗಿರೀಶ್, ಸದಸ್ಯರಾದ ಚಂದ್ರಶೇಖರ, ಲಕ್ಷ್ಮೀಶ, ಸಂತೋಷ್, ಸುಂದರ ಎಂ ಕೆ, ಲಿಂಗಪ್ಪ ಗೌಡ ಪಾಲ್ಗೊಂಡರು.

Leave a Reply

You May Have Missed

error: Content is protected !!