ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಂಕ್ರೀಟೀಕರಣಗೊಂಡ ರಸ್ತೆಗಳ ಉದ್ಘಾಟನೆ

ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಂಕ್ರೀಟೀಕರಣಗೊಂಡ ರಸ್ತೆಗಳ ಉದ್ಘಾಟನೆ

ನೇಸರ ಫೆ.04: ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಧರ್ಮಸ್ಥಳ-ಪಟ್ರಮೆ-ಗೋಳಿತೊಟ್ಟು ಡಾಮರೀಕರಣಗೊಂಡ ರಸ್ತೆಯನ್ನು ಪಟ್ರಮೆ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬಳಿ,ಅನಾರು-ನಿಡ್ಲೆ,ಪಟ್ರಮೆ-ನಿಡ್ಲೆ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಅನಾರು ದೇವಸ್ಥಾನ ಬಳಿ,ಕಲ್ಲಾಜೆ-ಮೈಕೆ ಕಾಂಕ್ರೀಟೀಕರಣ ಗೊಂಡ ರಸ್ತೆಯನ್ನು ಕಲ್ಲಾಜೆ ಬಳಿ ಫೆ.2 ರಂದು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಅನಾರು ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪ್ರಶಾಂತ್ ಪಾರೆಂಕಿ, ಪಟ್ರಮೆ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ,ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ, ಬಿಜೆಪಿ ಮುಖಂಡರಾದ ದೇವಪಾಲ ಅಜ್ರಿ, ಡಾಕಯ್ಯ ಗೌಡ ಪೆರ್ಲೆ, ಮನೋಜ್ ಕುಮಾರ್, ಜಯರಾಮ, ಸಂತೋಷ್ ಉಪಸ್ಥಿತರಿದ್ದರು.

ಭವ್ಯ ಪ್ರಾರ್ಥಿಸಿದರು.ಉಮೇಶ್ ಆಲಂಗೂರು ಸ್ವಾಗತಿಸಿದರು.ರುಕ್ಮಯ್ಯ ನೆಕ್ಕಿಲು ವಂದಿಸಿದರು.ಗೀತಾ ಪಿ.ಡಿ.ಕಾರ್ಯಕ್ರಮ ನಿರೂಪಿಸಿದರು.

 

 ಆಮಂತ್ರಣ:

👇👇👇👇

ಜಾಹೀರಾತು

Leave a Reply

You May Have Missed

error: Content is protected !!