ಕಾಡುಕೋಣ ಬೇಟೆ: 549 ಕೆ.ಜಿ ಮಾಂಸ ಸೇರಿ ಓರ್ವನ ಬಂಧನ

ಕಾಡುಕೋಣ ಬೇಟೆ: 549 ಕೆ.ಜಿ ಮಾಂಸ ಸೇರಿ ಓರ್ವನ ಬಂಧನ

ಕೊಡಗು ಜಿಲ್ಲೆಯ ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ಬೃಹತ್ ಕಾಡುಕೋಣವೊಂದನ್ನು(ಕಾಟಿ) ಬೇಟೆಯಾಡಲಾಗಿದೆ.

ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ 549 ಕೆ.ಜಿ ಕಾಡುಕೋಣ ಮಾಂಸ ಸೇರಿ ಅಕ್ರಮ ಬೇಟೆಯಾಡಿದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬೆನ್ನಟ್ಟುವ ಸಂದರ್ಭ ಜತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಎಂಬಾತ ಪರಾರಿಯಾಗಿದ್ದಾನೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಭಾನುವಾರ ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನ ಬೆನ್ನಟಿ ಹಿಡಿದಿದ್ದಾರೆ. ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ.

Leave a Reply

You May Have Missed

error: Content is protected !!