ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜ್ ವಿದ್ಯಾರ್ಥಿಗಳಿಂದ ಶ್ರಮದಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜ್ ವಿದ್ಯಾರ್ಥಿಗಳಿಂದ ಶ್ರಮದಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ವತಿಯಿಂದ ಒಂದು ದಿನದ ಶ್ರಮದಾನ ಕಾರ್ಯಕ್ರಮವನ್ನು ಮೇ 23ರಂದು ಅರಣ್ಯ ವಲಯ ನರ್ಸರಿ, ಸತ್ಯ ಪಾಲನ ಕೇಂದ್ರ ಕಲ್ಲಾಜೆ ಯಲ್ಲಿ ನಡೆಸಲಾಯಿತು.

ಅಧ್ಯಕ್ಷತೆಯನ್ನು ವಿಮಲ್ ಬಾಬು ಸುಬ್ರಮಣ್ಯ ವಲಯ ಅರಣ್ಯ ಅಧಿಕಾರಿಯವರು ವಹಿಸಿದ್ದರು.ಸಸ್ಯ ಪಾಲನೆ ಮತ್ತು ಬೀಜ ಅಭಿವೃದ್ಧಿ ಕುರಿತು ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸದಾಶಿವ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ, ಧನಂಜಯ ಸುಬ್ರಹ್ಮಣ್ಯ , ಲೋಕಯ್ಯ ಅರಣ್ಯ ವೀಕ್ಷಕರು ಸುಬ್ರಹ್ಮಣ್ಯ ಇವರು ಮಾರ್ಗದರ್ಶನ ನೀಡಿದರು.

ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ ಮಾರ್ಗದರ್ಶನದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ರಮಾನಾಥ್ ಸಹಕಾರದೊಂದಿಗೆ ನಡೆಯಿತು. ಅಂತಿಮ ವಾಣಿಜ್ಯ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

You May Have Missed

error: Content is protected !!