ನೆಲ್ಯಾಡಿ ಬಾರ್ ವೊಂದರಲ್ಲಿ ಕೈ ತಾಗಿದಕ್ಕೆ ಬಿಯರ್‌ ಬಾಟಲಿಯಲ್ಲಿ ಹಲ್ಲೆ; ಪ್ರಕರಣ ದಾಖಲು

ನೆಲ್ಯಾಡಿ ಬಾರ್ ವೊಂದರಲ್ಲಿ ಕೈ ತಾಗಿದಕ್ಕೆ ಬಿಯರ್‌ ಬಾಟಲಿಯಲ್ಲಿ ಹಲ್ಲೆ; ಪ್ರಕರಣ ದಾಖಲು

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿಯ ಬಾರ್ ವೊಂದರಲ್ಲಿ ಮೇ 26 ರಂದು ಬಾರ್‌ ನ ಒಳ ಪ್ರವೇಶಿಸುವಾಗ ಕೈ ತಾಗಿತೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮೂವರ ತಂಡ ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.

ನೆಲ್ಯಾಡಿ ಜೋಳಿ ಜೋಸೆಫ್‌ ಹಲ್ಲೆಗೊಳಗಾದವರು. ಕುಲದೀಪ್, ಬಿಪಿನ್‌ ಹಾಗೂ ಅಜೇಯ ಹಲ್ಲೆ ನಡೆಸಿದ ಆರೋಪಿಗಳು.

ಜೋಳಿ ಜೋಸೆಫ್‌ ಕ್ಲಾಸಿಕ್‌ ಬಾರ್‌ ಗೆ ಮದ್ಯ ಖರೀದಿಗೆ ತೆರಳಿದ್ದು, ಬಾರ್‌ ನ ಬಾಗಿಲಿನಲ್ಲಿ ಆರೊಪಿಗಳಾದ ಕುಲದೀಪ್, ಬಿಪಿನ್‌ ಹಾಗೂ ಅಜೇಯ ಎಂಬುವರು ಅಡ್ಡವಾಗಿ ನಿಂತಿದ್ದರು. ಒಳಪ್ರವೇಶಿಸುವಾಗ ಜೋಸೆಫ್‌ ಕೈ ಆರೋಪಿಗಳ ಪೈಕಿ ಓರ್ವರಿಗೆ ತಾಗಿರುತ್ತದೆ. ಇದರಿಂದ ಕೋಪಗೊಂಡ ಬಿಪಿನ್‌ ಎಂಬಾತ ಜೋಸೆಫ್‌ ಅವರನ್ನು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಬಿಯರ್‌ ಬಾಟ್ಲಿಯಿಂದ ತಲೆಗೆ ಹೊಡೆದಿರುತ್ತಾನೆ. ಇನ್ನಿಬ್ಬರು ಆರೋಪಿಗಳಾದ ಕುಲದೀಪ್‌ ಮತ್ತು ಅಜೇಯರವರುಗಳು ಹಲ್ಲೆಗೆ ಯತ್ನಿಸಿರುತ್ತಾರೆ. ಹಲ್ಲೆಯಿಂದ ಜೋಸೆಫ್‌ ಅವರಿಗೆ ತೀವ್ರ ಗಾಯಗಳಾಗಿವೆ. ಅವರ ಬೊಬ್ಬೆ ಕೇಳಿ ಬಾರ್‌ ನಲ್ಲಿದ್ದ ಸಿಬ್ಬಂದಿಗಳು ಹಾಗೂ ಜನರು ಓಡಿ ಬರುವುದನ್ನು ಕಂಡು ಆರೋಪಿಗಳು ಜೀವಬೆದರಿಕೆ ಒಡ್ಡಿ ತಪ್ಪಿಸಿಕೊಂಡಿರುತ್ತಾರೆ

ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

You May Have Missed

error: Content is protected !!