ನೆಲ್ಯಾಡಿ: ವೈದ್ಯರ ದಿನಾಚರಣೆ-ವೈದ್ಯರುಗಳಿಗೆ ಸನ್ಮಾನ

ನೆಲ್ಯಾಡಿ: ವೈದ್ಯರ ದಿನಾಚರಣೆ-ವೈದ್ಯರುಗಳಿಗೆ ಸನ್ಮಾನ

ನೆಲ್ಯಾಡಿ: ವೈದ್ಯರ ದಿನಾಚರಣೆಯ ಪ್ರಯುಕ್ತ ಜುಲೈ 1ರಂದು ನೆಲ್ಯಾಡಿ ಜೆಸಿಐ ಹಾಗೂ ನೆಲ್ಯಾಡಿ- ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಹೊಸಮಜಲಿನಲ್ಲಿರುವ ಅಶ್ವಿನಿ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ವೈದ್ಯರುಗಳಿಗೆ ಸನ್ಮಾನಿಸಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.

ವೈದ್ಯರಾದ ಡಾ.ಮುರಳೀಧರ, ಡಾ.ಸುಧಾ ದಂಪತಿಗಳನ್ನು ಹಾಗೂ ಡಾ.ಸುಪ್ರಿಯಾ ಜೊತೆಗೆ ನೆಲ್ಯಾಡಿಯ ದಂತ ವೈದ್ಯ ಡಾ.ಸುಧಾಕರ್ ಅವರನ್ನು ಶಾಲು ಹೊದಿಸಿ ಪುಷ್ಪ ಹಾಗೂ ಸಿಹಿ ತಿಂಡಿ ಹಂಚಿ ಗೌರವಿಸಿ ಶುಭಾಶಯವನ್ನು ನೀಡಲಾಯಿತು.

ನೆಲ್ಯಾಡಿ- ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್.ಕೆ ದುರ್ಗಾಶ್ರೀ ಅವರು ಮಾತನಾಡಿ ಸಮಾಜದಲ್ಲಿ ಜೀವ ರಕ್ಷಕರೆನಿಸಿದ ವೈದ್ಯರುಗಳ ಸೇವೆಯನ್ನು ಶ್ಲಾಘಿಸುವ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಡಾ. ಮುರಳೀಧರ ಅವರು ವೈದ್ಯರ ದಿನಾಚರಣೆಯ ದಿನದಂದು ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರಾ ಬಂಟ್ರಿಯಾಲ್ ಸ್ವಾಗತಿಸಿದರು, ಪೂರ್ವಾಧ್ಯಕ್ಷರಾದ ರವೀಂದ್ರ.ಟಿ ನಿರೂಪಿಸಿದರು.

ಜೆಸಿಐನ ಪೂರ್ವಾಧ್ಯಕ್ಷರಾದ ಪುರಂದರ ಗೌಡ, ರವಿಚಂದ್ರ ಹೊಸವಕ್ಲು, ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ- ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಕಾರ್ಯದರ್ಶಿ ಪ್ರಶಾಂತ ಸಿ.ಎಚ್ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!