ನೆಲ್ಯಾಡಿ: ಡಾಕ್ಟರ್ಸ್ ಡೇ- ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಶಿಶಿರ ಅವರಿಗೆ ಸನ್ಮಾನ

ನೆಲ್ಯಾಡಿ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಶಿಶಿರ ಅವರನ್ನು ಡಾಕ್ಟರ್ಸ್ ಡೇ ಪ್ರಯುಕ್ತ ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಜುಲೈ 1ರಂದು ಆರೋಗ್ಯ ಕೇಂದ್ರದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಅಧ್ಯಕ್ಷ ಶೀನಪ್ಪ.ಕೆ ಸ್ವಾಗತಿಸಿ ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳ ಬಗ್ಗೆ ಹಾಗೂ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಇನ್ನಷ್ಟು ಹೆಚ್ಚಿನ ಸೇವೆ ನೆಲ್ಯಾಡಿಯ ಸುತ್ತಮುತ್ತಲಿನ ಜನತೆಗೆ ಸಿಗುವಂತಾಗಲಿ ಎಂದರು.
ಕಾರ್ಯದರ್ಶಿ ಮೋಹನ್ ಕುಮಾರ್.ಡಿ, ಸದಸ್ಯರಾದ ದಯಾನಂದ ಆದರ್ಶ ಪ್ರಶಾಂತ್.ಸಿ.ಎಚ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
























Leave a Reply