ನೆಲ್ಯಾಡಿ ಗ್ರಾ.ಪಂ.ಗೆ ಪ್ರಭಾರ ಪಿಡಿಒ ಆಗಿ ಮೋಹನ್‌ಕುಮಾರ್.ಜಿ.

ನೆಲ್ಯಾಡಿ ಗ್ರಾ.ಪಂ.ಗೆ ಪ್ರಭಾರ ಪಿಡಿಒ ಆಗಿ ಮೋಹನ್‌ಕುಮಾರ್.ಜಿ.

ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ಗೆ ಖಾಯಂ ಪಿಡಿಒ ನೇಮಕ ವಿಚಾರ ಚರ್ಚೆಯಾಗುತ್ತಿದ್ದಂತೆ ಇಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಕುಟ್ರುಪ್ಪಾಡಿ ಗ್ರಾ.ಪಂ.ಪಿಡಿಒ ಆನಂದ ಗೌಡರ ಬದಲಿಗೆ ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್ ಕುಮಾರ್ ಜಿ.ಅವರಿಗೆ ಹೆಚ್ಚುವರಿ ಪ್ರಭಾರ ನೀಡಿ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರು ಜು.4ರಂದು ಆದೇಶಿಸಿದ್ದಾರೆ.

ಅನಾರೋಗ್ಯದಿಂದಾಗಿ ನೆಲ್ಯಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯ ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ನೆಲ್ಯಾಡಿ ಗ್ರಾ.ಪಂ.ನ ಹೆಚ್ಚುವರಿ ಪ್ರಭಾರ ತೆಗೆದು ಪೂರ್ಣ ಪ್ರಮಾಣದಲ್ಲಿ ಕುಟ್ರುಪ್ಪಾಡಿ ಗ್ರಾ.ಪಂ.ನಲ್ಲಿ ಕೆಲಸ ನಿರ್ವಹಿಸಲು ಆದೇಶಿಸುವಂತೆ ತಾ.ಪಂ.ಇಒ ಅವರಿಗೆ ಪಿಡಿಒ ಆನಂದ ಗೌಡ ಅವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ತಾ.ಪಂ.ಇಒ ಅವರು ಆನಂದ ಗೌಡರ ಹೆಚ್ಚುವರಿ ಪ್ರಭಾರ ರದ್ದುಗೊಳಿಸಿ ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್‌ಕುಮಾರ್ ಜಿ.ಅವರನ್ನು ನೆಲ್ಯಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದ್ದಾರೆ.

Leave a Reply

You May Have Missed

error: Content is protected !!