ಕಡಬ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ

ಕಡಬ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ

ಕಡಬ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮವು ಜು.4ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಕಡಬ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಅಭಿನಂದನ್ ಎಂ.ಎಸ್.ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಕ್ಕಳಿಗೆ ನಾಮನಿರ್ದೇಶಿತ ಫಲಕಗಳನ್ನು ಹಸ್ತಾಂತರಿಸಿ ಮಾತನಾಡಿದರು. ಮಕ್ಕಳು ಸಮಾಜದ ಜವಾಬ್ದಾರಿಯನ್ನು ಅರಿತು ಶಿಸ್ತು ಸಂಯಮದಿಂದ ಬಾಳಬೇಕು ಎಂದರು. ತದನಂತರ ಅವರು ಮಕ್ಕಳಿಗೆ ಕಾನೂನು ಹಾಗೂ ಹಕ್ಕುಗಳ ಮನವರಿಕೆಯ ಅಗತ್ಯತೆಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವೆಂಕಟರಮಣ ರಾವ್ ಮಂಕುಡೆ, ಶಾಲಾ ಪ್ರಭಾರ ಮುಖ್ಯಮಂತ್ರಿ ಶ್ವೇತ ಉಪಸ್ಥಿತರಿದ್ದರು. ಶಾಲಾ ಸಾಂಸ್ಕೃತಿಕ ಪ್ರತಿನಿಧಿ ಕುಮಾರಿ ಜಾನ್ವಿ ವಂದಿಸಿದರು. ಸುಮಂಗಲ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!