ಶಿಶಿಲ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಶಿಶಿಲ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಕೊಕ್ಕಡ: ಶಿಶಿಲ ರಸ್ತೆಯ ಭಂಡಿಹೊಳೆ ಎಂಬಲ್ಲಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಜು.8ರಂದು ನಡೆದಿದೆ.

ಗಾಯಗೊಂಡ ಚಾಲಕ ಶಿಶಿಲದ ತೀರ್ಥರಾಮ ಗೌಡ ಎಂದು ಗುರುತಿಸಲಾಗಿದೆ.

ಶಿಶಿಲದಿಂದ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸುವ ಲಾರಿ ವಿಪರೀತ ಸುರಿಯುವ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅರಸಿನಮಕ್ಕಿ ಹಾಗೂ ಶಿಶಿಲದ ಶೌರ್ಯ ವಿಪತ್ತು ಸ್ವಯಂಸೇವಕರು ಪಲ್ಟಿಯಾದ ಲಾರಿಯಲ್ಲಿ ಇದ್ದ ಸೆಂಟ್ರಿಂಗ್ ಸಾಮಾಗ್ರಿಗಳನ್ನು ಖಾಲಿ ಮಾಡಿ ಲಾರಿಯನ್ನು ಸುಸ್ಥಿತಿಗೆ ತರುವಲ್ಲಿ ಸಹಕರಿಸಿದರು.

Leave a Reply

You May Have Missed

error: Content is protected !!