ಸೌತಡ್ಕ ದೇವಳದಲ್ಲಿ 80 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಲ್ಲಿಕಾ ಪಕ್ಕಳ ರಿಂದ ಶಿಲನ್ಯಾಸ

ಸೌತಡ್ಕ ದೇವಳದಲ್ಲಿ 80 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಲ್ಲಿಕಾ ಪಕ್ಕಳ ರಿಂದ ಶಿಲನ್ಯಾಸ

ಕೊಕ್ಕಡ: ಸುಮಾರು 80ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೌತಡ್ಕ ದೇವಳದ ಆವರಣದಲ್ಲಿ ಜುಲೈ 14ರಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸಮ್ಮುಖದಲ್ಲಿ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಶಿಲನ್ಯಾಸ ಪೂಜೆ ನೆರವೇರಿಸಿದರು.

ಮಲ್ಲಿಕಾ ಪಕ್ಕಳ ಅವರು ಮಾಜಿ ಟ್ರಸ್ಟಿಗಳ ಸತತ ಪರಿಶ್ರಮದಿಂದ ಈ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸಾಧ್ಯವಾಗಿದೆ. ತಮ್ಮ ಅವಧಿ ಮುಗಿದ ಮೇಲು ನಿರಂತವಾಗಿ ನನ್ನನ್ನು ಸಂಪರ್ಕಿಸಿ ಘಟಕಕ್ಕೆ ಅನುಮತಿ ದೊರಕಿಸಲು ಶ್ರಮ ಪಟ್ಟಿದ್ದಾರೆ ಅವರಿಗೆ ದೇವರು ಆಶೀರ್ವಾದ ಮಾಡಲಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ದೇವಳದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ನೈಮಿಷ ಹೌಸ್ ಆಫ್ ಸ್ಪೈಸಸ್ ಮಾಲಕ ಬಾಲಕೃಷ್ಣ ನೈಮಿಷ, ದೇವಳದ ಮ್ಯಾನೇಜರ್ ರಾಮಕೃಷ್ಣ ಶಬರಾಯ, ದೇವಳದ ಸಿಬ್ಬಂದಿಗಳು, ಮಾಜಿ ಟ್ರಸ್ಟಿಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!