ಇಚ್ಲಂಪಾಡಿ : ಭಾರೀ ಮಳೆ, ರಸ್ತೆ ಸಂಪರ್ಕ ಬಂದ್, ದೈವಸ್ಥಾನ, ತೋಟ ಜಲಾವೃತ

ಇಚ್ಲಂಪಾಡಿ : ಭಾರೀ ಮಳೆ, ರಸ್ತೆ ಸಂಪರ್ಕ ಬಂದ್, ದೈವಸ್ಥಾನ, ತೋಟ ಜಲಾವೃತ

ನೆಲ್ಯಾಡಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಂಡ್ಯ ಹೊಳೆ ತುಂಬಿ ಹರಿಯುತ್ತಿದ್ದು ಇಚ್ಲಂಪಾಡಿಯಲ್ಲಿ ನೀರು ರಸ್ತೆಗೆ ನುಗ್ಗಿ ಸಂಪರ್ಕ ಸ್ಥಗಿತಗೊಂಡಿದೆ. ತೋಟಕ್ಕೆ ನೀರು ನುಗ್ಗಿದ್ದು ದೈವಸ್ಥಾನ ಜಲಾವೃತಗೊಂಡಿದೆ.

ಸಕಲೇಶಪುರ ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು ಗುಂಡ್ಯ ಹೊಳೆ ತುಂಬಿ ಹರಿಯುತ್ತಿದೆ. ಇದರಿಂದಾಗಿ ಇಚ್ಲಂಪಾಡಿಯಲ್ಲಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ಇಚ್ಲಂಪಾಡಿ – ಕಲ್ಲುಗುಡ್ಡೆ, ಇಚ್ಲಂಪಾಡಿ – ಮಡಿಪು ರಸ್ತೆಗೆ ನೀರು ಬಂದು ಸಂಪರ್ಕ ಸ್ಥಗಿತಗೊಂಡಿದೆ.

ಇಚ್ಲಂಪಾಡಿ ಉಳ್ಳಾಕ್ಲು ದೈವಸ್ಥಾನ, ಗಂಗಾಧರೇಶ್ವರ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿದೆ. ಹೊಳೆ ಬದಿಯಿರುವ ವಿಶ್ವನಾಥ ಗೌಡ, ಮೇಹಿ ಜಾರ್ಜ್ ಅವರ ತೋಟಕ್ಕೆ ನೀರು ನುಗ್ಗಿದೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.

Leave a Reply

You May Have Missed

error: Content is protected !!