ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗೆ ತಾ. ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ

ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗೆ ತಾ. ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ

ನೆಲ್ಯಾಡಿ: ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟ ಅ.5ರಂದು ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರೌಢಶಾಲಾ ವಿಭಾಗದಲ್ಲಿ ಜಾಹೀರಾ ಮಾಲಿಕ್ ಚಿನ್ನದ ಪದಕ, ಆದಿತ್ಯ ಬೆಳ್ಳಿಯ ಪದಕ ಹಾಗೂ ಚೆರ್ರಿ ಆನೆಟ್ ಚಿನ್ನದ ಪದಕ, ಜಿಯಾ ಕತಿಜ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಕರಾಟೆ ಶಿಕ್ಷಕಿ ಅಲ್ಫೋನ್ಸ ಅವರು ತರಬೇತಿಯನ್ನು ನೀಡಿರುತ್ತಾರೆ. ಕಾಲೇಜಿನ ಸಂಚಾಲಕ ಫಾ. ಜೈಸನ್, ಪ್ರಾಂಶುಪಾಲ ಡಾ.ವರ್ಗೀಸ್ ಕೈಪನಡ್ಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

Leave a Reply

You May Have Missed

error: Content is protected !!