ಪಟ್ರಮೆ: ಬೈಕ್ ಅಪಘಾತದಲ್ಲಿ ಸ್ಮರಣಶಕ್ತಿ ಕಳೆದುಕೊಂಡಿದ್ದ ಸದಾಶಿವ ದಾಸ್ ನಿಧನ

ಪಟ್ರಮೆ: ಬೈಕ್ ಅಪಘಾತದಲ್ಲಿ ಸ್ಮರಣಶಕ್ತಿ ಕಳೆದುಕೊಂಡಿದ್ದ ಸದಾಶಿವ ದಾಸ್ ನಿಧನ

ಕೊಕ್ಕಡ: 2ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೈಕ್ ಅಪಘಾತವಾಗಿ ತಲೆಗೆ ಪೆಟ್ಟಾಗಿ ಮೆದುಳು ಘಾಸಿಗೊಂಡು ಸ್ಮರಣಶಕ್ತಿ ಕಳೆದುಕೊಂಡ ಪಟ್ರಮೆ ಗ್ರಾಮದ ಕಲ್ಲರಿಗೆ ನಿವಾಸಿ ಸದಾಶಿವ ದಾಸ್(25)ನಿಧನ.

ಎರಡು ವರ್ಷಗಳಿಂದ ಯಾವುದೇ ಹೊರ ಪ್ರಪಂಚದ ಪರಿಜ್ಞಾನವಿಲ್ಲದೆ ಮಲಗಿದ್ದಲ್ಲಿ ಇದ್ದ ಇವರು ಕಳೆದ ಒಂದು ವಾರದ ಹಿಂದೆ ಆರೋಗ್ಯ ತೀರ ಹದಗೆಟ್ಟ ಹಿನ್ನೆಲೆಯಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ತಾಯಿ, ಇಬ್ಬರು ಸಹೋದರರು ಹಾಗೂ ನಾಲ್ಕು ಸಹೋದರಿಯರು ಇದ್ದಾರೆ

Leave a Reply

You May Have Missed

error: Content is protected !!