ನೆಲ್ಯಾಡಿ: ಬಿರುಗಾಳಿಗೆ 4ಮನೆ ಹಾಗೂ 2ವಿದ್ಯುತ್ ಕಂಬಗಳಿಗೆ ಹಾನಿ

ನೆಲ್ಯಾಡಿ: ಬಿರುಗಾಳಿಗೆ 4ಮನೆ ಹಾಗೂ 2ವಿದ್ಯುತ್ ಕಂಬಗಳಿಗೆ ಹಾನಿ

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಬಳಿ ಇರುವ ಜನತಾ ಕಾಲೋನಿಯಲ್ಲಿ ಸೆ.11ರಂದು ರಾತ್ರಿ ಬೀಸಿದ ಬಿರುಗಾಳಿಗೆ ನಾಲ್ಕು ಮನೆ ಹಾಗೂ ಎರಡು ವಿದ್ಯುತ್ ಕಂಬಗಳು ಹಾನಿಗೊಂಡ ಘಟನೆ ನಡೆದಿದೆ.

ಜನತಾ ಕಾಲೋನಿಯ ನಿವಾಸಿಗಳಾದ ಐತಪ್ಪ, ಬಾಬು ಆಚಾರಿ, ಲೋಕೇಶ್, ಇಸುಬು ಎಂಬುವರ ಮನೆಯ ಮೇಲ್ಚಾವಣಿಯ ಶೀಟ್ ಗಳು ಹಾರಿ ಹಾನಿಗೊಂಡಿದೆ ಹಾಗೂ ಸಮೀಪದಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.

ಸ್ಥಳಕ್ಕೆ ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿದ್ದಾರೆ.

Leave a Reply

You May Have Missed

error: Content is protected !!