ಕೊಕ್ಕಡ : ಶ್ವಾನಗಳಿಗೆ ಉಚಿತ ರೇಬಿಸ್ ಶಿಬಿರ

ಕೊಕ್ಕಡ : ಶ್ವಾನಗಳಿಗೆ ಉಚಿತ ರೇಬಿಸ್ ಶಿಬಿರ

ಕೊಕ್ಕಡ ಅಮೃತ ಗ್ರಾಮ ಪಂಚಾಯತಿ ವತಿಯಿಂದ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವತಿಯಿಂದ ಕೊಕ್ಕಡ ಗ್ರಾಮದಲ್ಲಿ ಸೆ.10ರಂದು ಉಚಿತ ರೇಬಿಸ್ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದ ಉದ್ಘಾಟನೆಯನ್ನು ಪಂಚಾಯತಿ ಅಧ್ಯಕ್ಷ ಬೇಬಿ ಮತ್ತು ಉಪಾಧ್ಯಕ್ಷ ಪ್ರಭಾಕರ ಗೌಡ ನೆರವೇರಿಸಿದರು, ಪಂಚಾಯಿತಿ ಕಾರ್ಯದರ್ಶಿ ಭಾರತಿ ಉಪಸ್ಥಿತರಿದ್ದರು. ಪಶುವೈದ್ಯ ಸೇವಾ ಇಲಾಖೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಸಿ.ಆರ್.ರಂಗನಾಥ, ಜಾನುವಾರು ಅಧಿಕಾರಿ ಪ್ರಶಾಂತ್ ಕುಮಾರ್, ಡಿ ಗ್ರೂಪ್ ನೌಕರ ಹರಿಪ್ರಸಾದ್ ಅವರು ಸುಮಾರು 200 ಶ್ವಾನಗಳಿಗೆ. ಲಸಿಕೆ ನೀಡಿದರು.

ಪಂಚಾಯತಿ ಸಿಬ್ಬಂದಿಗಳು ಶಿಬಿರಕ್ಕೆ ಸಹಕರಿಸಿದರು.

Leave a Reply

You May Have Missed

error: Content is protected !!