ಅರಸಿನಮಕ್ಕಿ: ಓಮಿನಿ ಕಾರು ಮತ್ತು ಲಾರಿ ನಡುವೆ ಅಪಘಾತ

ಅರಸಿನಮಕ್ಕಿ: ಓಮಿನಿ ಕಾರು ಮತ್ತು ಲಾರಿ ನಡುವೆ ಅಪಘಾತ

ಕೊಕ್ಕಡ:ಓಮಿನಿ ಕಾರು ಮತ್ತು ತೆಂಗಿನಕಾಯಿ ಸಾಗಾಟದ ಲಾರಿ ಮಧ್ಯೆ ಅರಸಿನಮಕ್ಕಿ ಪ್ರೌಢಶಾಲೆ ಮುಂಭಾಗ ಅಪಘಾತ ಸಂಭವಿಸಿದ್ದು ಅಪಘಾತದ ರಭಸಕ್ಕೆ ಓಮಿನಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಮುರಿದು ಬಿದ್ದ ಘಟನೆ ಸೆ.27ರಂದು ನಡೆದಿದೆ.

ರಬ್ಬರ್ ಖರೀದಿ ಕೇಂದ್ರದ ಮಾಲೀಕರೊಬ್ಬರ ಓಮಿನಿ ಕಾರು ಇದ್ದಾಗಿದ್ದು, ಓಮಿನಿ ಕಾರಿನ ಮುಂಭಾಗ ಮತ್ತು ಬಲಭಾಗ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

Leave a Reply

You May Have Missed

error: Content is protected !!