ನೆಲ್ಯಾಡಿ: ಹಲ್ಲೆ ಆರೋಪ-ದೂರು

ನೆಲ್ಯಾಡಿ: ಹಲ್ಲೆ ಆರೋಪ-ದೂರು

ನೆಲ್ಯಾಡಿ: ಜೋಲಿ ತೋಮಸ್ ಎಂಬಾತ ಮಲೆಯಾಳಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವುದಾಗಿ ಕೊಣಾಲು ನಿವಾಸಿ ರೆಜಿಮೋನ್ ಜೋಸೆಫ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ರೆಜಿಮೋನ್ ಜೋಸೆಫ್ ಅವರು ನೆಲ್ಯಾಡಿ ಪೇಟೆಯಲ್ಲಿ ಗೂಡಂಗಡಿ ಹೊಂದಿದ್ದು ನ.5ರಂದು ರಾತ್ರಿ ಅಂಗಡಿಗೆ ಬಾಗಿಲು ಹಾಕಿ ರುಕ್ಮಯ ಎಂಬವರ ಜೊತೆಯಲ್ಲಿ ಮತ್ತಾಯಿ ಎಂಬವರ ಮನೆಗೆ ಹೋಗಿ ಅಲ್ಲಿ ಮಾತನಾಡಿಕೊಂಡು ತಡರಾತ್ರಿ ಅಲ್ಲಿಂದ ಹೊರಟು ಕೊಣಾಲು ಮನೆ ಕಡೆಗೆ ಹೋಗುತ್ತಿದ್ದವರು ನೆಲ್ಯಾಡಿ ಪೇಟೆಗೆ ತಲುಪಿದಾಗ ಪರಿಚಯದ ಜೋಲಿ ತೋಮಸ್ ಎಂಬಾತ ಮಲೆಯಾಳಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಹಲ್ಲೆಯಿಂದ ಗಾಯವಾಗಿರುವುದಾಗಿ ರೆಜಿಮೋನ್ ಜೋಸೆಫ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!