ಡಾ.ಶಿವರಾಮ ಕಾರಂತ ಪ್ರಶಸ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾ.ಪಂ.ಆಯ್ಕೆ

ಡಾ.ಶಿವರಾಮ ಕಾರಂತ ಪ್ರಶಸ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾ.ಪಂ.ಆಯ್ಕೆ

ನೆಲ್ಯಾಡಿ: ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಅಂಗವಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್‌ಗಳಿಗೆ ನೀಡುವ 2024ನೇ ಸಾಲಿನ ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಶಿರಾಡಿ ಗ್ರಾಮ ಪಂಚಾಯಿತಿನಲ್ಲಿ 664 ಮಂದಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಮಾಡಿಸಿಕೊಂಡಿದ್ದಾರೆ. 2023-24ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯಿತಿನಲ್ಲಿ 140 ಕಾಮಗಾರಿ ನಡೆದಿದ್ದು 72,41,496 ರೂ. ಖರ್ಚು ಆಗಿದೆ. ಇದರಲ್ಲಿ 53.08 ಲಕ್ಷ ರೂ.ಕೂಲಿ ಮೊತ್ತ ಹಾಗೂ 18.68 ಲಕ್ಷ ರೂ.ಸಾಮಾಗ್ರಿ ಮೊತ್ತ ಪಾವತಿಯಾಗಿದೆ. ಒಟ್ಟು 16,797 ಮಾನವ ದಿನ ಸೃಜನೆಯಾಗಿದೆ. ಘನತ್ಯಾಜ್ಯ ಘಟಕ-1, ಕೋಳಿಶೆಡ್-1, ಹಟ್ಟಿ ರಚನೆ-9, ವಸತಿ-18, ಬಾವಿ-6, ಗೊಬ್ಬರಗುಂಡಿ-2, ಪೌಷ್ಠಿಕ ತೋಟ-5, ರಸ್ತೆ-4, ಅಡಿಕೆ ಗಿಡ-87, ಸೋಕ್‌ಪೀಟ್-2, ಇಂಗುಗುಂಡಿ-1, ಕಾಲುವೆ-2, ಕೃಷಿ ಹೊಂಡ-2 ಕಾಮಗಾರಿ ನಡೆದಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯಿತಿ ಮಾಡಿರುವ ಸಾಧನೆ ಪರಿಗಣಿಸಿ 2024ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನ.10ರಂದು ಕೋಟತಟ್ಟುನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ವಿಜಯಶಂಕರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Leave a Reply

You May Have Missed

error: Content is protected !!