ಕೊಕ್ಕಡ: ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯ ಅಂಗಡಿಯಿಂದ ರೂ. 1.80ಲಕ್ಷ ಹಣ ಕಳ್ಳತನ

ಕೊಕ್ಕಡ: ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯ ಅಂಗಡಿಯಿಂದ ರೂ. 1.80ಲಕ್ಷ ಹಣ ಕಳ್ಳತನ

ಕೊಕ್ಕಡ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಓಣಿತ್ತಾರು ಟ್ರೇಡರ್ಸ್ ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯವರ ಅಂಗಡಿಯಿಂದ ರೂ. 1.80ಲಕ್ಷ ಹೆಚ್ಚು ಹಣ ಲಪಟಾಯಿಸಿದ ಘಟನೆ ನ.15ರಂದು ನಡೆದಿದೆ.

ಮಧ್ಯಾಹ್ನದ ಹೊತ್ತಲ್ಲಿ ಅಂಗಡಿಗೆ ಬಾಳೆಹಣ್ಣು ಖರೀದಿ ನೆಪದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ವಂಚಕರು ಮಾಲಕ ಇಸುಬು ಅವರು ಒಳಗಿನಿಂದ ಬಾಳೆಗೊನೆ ತರಲು ತೆರಳಿದ ಸಂದರ್ಭದಲ್ಲಿ ಟೇಬಲ್ ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಕ್ಕಡ ಪರಿಸರದಲ್ಲಿ ಹಾಡಹಾಗಲೇ ಕಳ್ಳತನಗಳು ನಡೆಯುತ್ತಲೇ ಇದ್ದು ಇದರಿಂದ ಕೊಕ್ಕಡ ಪರಿಸರದ ಜನರು ಜಾಗೃತೆ ವಹಿಸುವಂತೆ ತಿಳಿಸಲಾಗಿದೆ.

Leave a Reply

You May Have Missed

error: Content is protected !!