ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಬಂದ್‌ ಗೆ ನೆಲ್ಯಾಡಿ,ಕೊಕ್ಕಡ, ಗೋಳಿತ್ತೊಟ್ಟು ನಲ್ಲಿ ಮಿಶ್ರ ಪ್ರತಿಕ್ರಿಯೆ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಬಂದ್‌ ಗೆ ನೆಲ್ಯಾಡಿ,ಕೊಕ್ಕಡ, ಗೋಳಿತ್ತೊಟ್ಟು ನಲ್ಲಿ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಬಂದ್‌ ಗೆ ನೆಲ್ಯಾಡಿ,ಕೊಕ್ಕಡ, ಗೋಳಿತ್ತೊಟ್ಟು ನಲ್ಲಿ ಮಿಶ್ರ ಪ್ರತಿಕ್ರಿಯೆ

ನೆಲ್ಯಾಡಿ: ಸುಹಾಸ್ ಶೆಟ್ಟಿ ಹತ್ಯೆಯ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ ದ.ಕ. ಜಿಲ್ಲಾ ಬಂದ್‌ಗೆ ನೆಲ್ಯಾಡಿ,ಕೊಕ್ಕಡ, ಗೋಳಿತ್ತೊಟ್ಟು ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಿಂದೂ ಸಮುದಾಯದವರು ತಮ್ಮ ವ್ಯಾಪಾರ, ವಹಿವಾಟನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡರು.

ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೀವ್ರ ಎದುರಿಸಬೇಕಾಯಿತು. ಆದರೆ, ಎಂದಿನಂತೆ ಅಟೋ ರಿಕ್ಷಾ ಹಾಗೂ ಸರ್ವೀಸ್ ಜೀಪುಗಳ ಸಂಚಾರ ಎಂದಿನಂತೆ ಮುಂದುವರಿದಿದೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, ಮುಸ್ಲಿಂ ಹಾಗೂ ಇತರ ಸಮುದಾಯದ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಪೂರ್ವಾಹ್ನ 11ರ ಬಳಿಕ ಪೇಟೆಯಲ್ಲಿ ಜನ ಸಂದಣಿಯೂ ಎಂದಿನಂತೆ ಇರಲಿಲ್ಲ. ಈವರೆಗೆ ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

  •  

Leave a Reply

You May Have Missed

error: Content is protected !!