SSLC Results 2025: ದಕ್ಷಿಣ ಕನ್ನಡಕ್ಕೆ ರಾಜ್ಯದಲ್ಲಿ ಮೊದಲ ಸ್ಥಾನ

SSLC Results 2025

SSLC Results 2025: ದಕ್ಷಿಣ ಕನ್ನಡಕ್ಕೆ ರಾಜ್ಯದಲ್ಲಿ ಮೊದಲ ಸ್ಥಾನ

ಮಂಗಳೂರು: 2025ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದು ಗೌರವ ಪಡೆದಿದೆ.

ಜಿಲ್ಲೆಯಲ್ಲಿ ಒಟ್ಟು ಶೇ 91.12ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರು ಹೆಚ್ಚಿನ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 27,795 ವಿದ್ಯಾರ್ಥಿಗಳ ಪೈಕಿ 25,326 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ 92.12 ಫಲಿತಾಂಶ ದಾಖಲಿಸಿದ್ದ ಜಿಲ್ಲೆ ಈ ಬಾರಿ ಸ್ವಲ್ಪ ಕುಸಿತ ಕಂಡರೂ, ರಾಜ್ಯದಲ್ಲಿಯೇ ಅಗ್ರ ಸ್ಥಾನದಲ್ಲಿರುವುದು ವಿಶೇಷವಾಗಿದೆ.

“ಜಿಲ್ಲೆಯಲ್ಲಿ ಶೇ 94 ಫಲಿತಾಂಶದ ನಿರೀಕ್ಷೆ ಇತ್ತು. ಆದರೆ ಸಮಗ್ರವಾಗಿ ಫಲಿತಾಂಶ ಕಡಿಮೆಯಾಗಿರುವುದರಿಂದ ನಮ್ಮ ಅಂದಾಜಿಗಿಂತ ಸ್ವಲ್ಪ ಕಡಿಮೆ ದಾಖಲಾಗಿದ್ರೂ, ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆ ಸಂಗತಿ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮದ ಫಲ ಇದಾಗಿದೆ. ಪಾಲಕರ ಸಹಕಾರವೂ ಉತ್ತಮವಾಗಿದೆ,” ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ಪ್ರತಿಕ್ರಿಯಿಸಿದರು

  •  

Leave a Reply

You May Have Missed

error: Content is protected !!