ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಪಲ್ಟಿ | ಹಲವರಿಗೆ ಗಾಯ

Puttur

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಪಲ್ಟಿ | ಹಲವರಿಗೆ ಗಾಯ

ಪುತ್ತೂರು : ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾದ ಘಟನೆ ಮಾಣಿ ಕಲ್ಲಡ್ಕ ರಸ್ತೆಯ ಸಮುದ್ರ ಹೋಟೆಲ್ ಬಳಿ ನಡೆದಿದೆ. ಬಸ್‌ ಪಲ್ಟಿಯಾದ ಪರಿಣಾಮ ಹಲವರಿಗೆ ಗಾಯಗಳಾಗಿವೆ. ಬಸ್ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿತ್ತು ಎನ್ನಲಾಗಿದೆ.

ಬೆಳಗಿನಿಂದಲೇ ಬಾರಿ ಮಳೆ ಸುರಿಯುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದೆ. ಇದರಿಂದ ಬಸ್ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

  •  

Leave a Reply

You May Have Missed

error: Content is protected !!