ಮಂಗಳೂರು: 108 ಅರೋಗ್ಯ ಕವಚ ಯೋಜನೆಯ “ಪೈಲೆಟ್ ದಿನಾಚರಣೆ”

Mangalore

ಮಂಗಳೂರು: 108 ಅರೋಗ್ಯ ಕವಚ ಯೋಜನೆಯ “ಪೈಲೆಟ್ ದಿನಾಚರಣೆ”

ಮಂಗಳೂರು: ದಕ್ಷಿಣ ಕನ್ನಡದ ಮಂಗಳೂರು ನಗರದ ಲೇಡಿ ಗೋಷನ್ ಜಿಲ್ಲಾ ಆಸ್ಪತ್ರೆ ಸಮುದಾಯ ಭವನದಲ್ಲಿ ಮೇ 26ರಂದು 108 ಅರೋಗ್ಯ ಕವಚ ಯೋಜನೆಯ “ಪೈಲೆಟ್ ದಿನಾಚರಣೆ” ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮವನ್ನು 108 ಗ್ರೀನ್ ಹೆಲ್ತ್ ಸರ್ವಿಸ್ ಹಾಗೂ ಇ.ಎಂ.ಐ.ಆರ್.ಐಯ (EMRI) ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ ಎಸ್ ಅವರ ಸಾನಿಧ್ಯದಲ್ಲಿ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ 108 ಸೇವೆಯ ಎಲ್ಲಾ ಪೈಲೆಟ್ ಗೆ ಅಭಿನಂದನೆ ಸಲ್ಲಿಸಲಾಯಿತು. 108 ಆರೋಗ್ಯ ಕವಚದ ದಕ್ಷಿಣ ಕನ್ನಡ ಜಿಲ್ಲಾ ವ್ಯವಸ್ಥಾಪಕರಾದ ಮುನೀಶ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಪೈಲೆಟ್ ದಿನಾಚರಣೆಯು 108 ಸೇವೆಯ ಯಶಸ್ವಿ ಕಾರ್ಯಚಟುವಟಿಕೆಗಳನ್ನು ಹೆಮ್ಮೆಪಡುವಂತಹ ಸಂಭ್ರಮದ ಕ್ಷಣವಾಗಿದ್ದು, ಆರೋಗ್ಯ ರಕ್ಷಣೆಯಲ್ಲಿನ ಇಂತಹ ತುರ್ತು ಸೇವೆಗಳ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳುವ ವೇದಿಕೆಯಾಗಿತು.

  •  

Leave a Reply

You May Have Missed

error: Content is protected !!