ಜೇಸಿಐ ಡೈಮಂಡ್ ಮಂಗಳೂರು ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೇಸಿಐ ಡೈಮಂಡ್ ಮಂಗಳೂರು ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

ನೇಸರ ಮಾ.8: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.7ರಂದು ಜೇಸಿ ಮಂಗಳೂರು ಡೈಮಂಡ್ ಘಟಕದ ವತಿಯಿಂದ ದ.ಕ.ಹಿರಿಯ ಪ್ರಾರ್ಥಮಿಕ ಶಾಲೆ, ಮಣ್ಣಗುಡ್ಡೆ ಮಂಗಳೂರುನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಡೈಮಂಡ್ ಮಂಗಳೂರು ಅಧ್ಯಕ್ಷರಾದ ಜೆಎಫ್ಎಂ.ಗೀತಾ ಶೇಟ್ ವಹಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ.ಅರ್ಚನಾ ಭಟ್ ಮಾತನಾಡಿ ರಕ್ತ ಕಡಿಮೆಯಾದೊಡನೆ ಬರುವ ರೋಗಗಳು, ಮಹಿಳೆಯ ಆರೋಗ್ಯದಲ್ಲಿ ಕಾಣುವ ಅಡ್ಡಪರಿಣಾಮಗಳು ಮೊದಲಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಜೆಎಫ್ಎಂ.ರವಿರಾಜ್.ಎ.ಪಿ ವಲಯ ನಿರ್ದೇಶಕರು, ರಾಘವೇಂದ್ರ ಗಂಗೂಲಿ, ಮೆಡಿಕ್ವಿಸ್ಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಉಚಿತ ಆರೋಗ್ಯ ತಪಾಸಣೆಯನ್ನು ಡಾ ಅರ್ಚನಾ.ಭಟ್ ಮತ್ತು ಮೆಡಿಕ್ವಿಟ್ಸ್ ಆರೋಗ್ಯ ಸಿಬ್ಬಂದಿಗಳು ನಡೆಸಿಕೊಟ್ಟರು. ಬಳಿಕ ಮೋಜಿನ ಚಟುವಟಿಕೆ ಮತ್ತು ಆಟಗಳನ್ನು ನಡೆಸಿದರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

You May Have Missed

error: Content is protected !!