ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಮಹಿಳಾ ಸಾಧಕಿಗೆ ಸನ್ಮಾನ

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಮಹಿಳಾ ಸಾಧಕಿಗೆ ಸನ್ಮಾನ

ನೇಸರ ಮಾ.8: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಳೆದ ಮೂರು ವರ್ಷಗಳಿಂದ ನೆಲ್ಯಾಡಿ ಪರಿಸರದಲ್ಲಿ ಪ್ರಥಮ ಮಹಿಳಾ ರಿಕ್ಷಾ ಮಾಲಕಿ ಹಾಗೂ ಚಾಲಕಿಯಾಗಿ ದುಡಿಯುತ್ತಿರುವ ಶ್ರೀಮತಿ ಪ್ರೇಮಾ ಪೂಸಳ್ಳಿಕೆ ಎಂಬವರನ್ನು ಇಂದು(ಮಾ.8) ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ನೆಲ್ಯಾಡಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಂಗಾಧರ ಹೊಸಮನೆ. ನೆಲ್ಯಾಡಿ ಜೇಸಿ ಅಧ್ಯಕ್ಷರಾದ ಜೇಸಿ.ಜಯಂತಿ.ಬಿ.ಎಂ. ಸೀನಿಯರ್ ಚೇಂಬರ್ ನ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಅತಿಥಿಗಳನ್ನು ವೇದಿಕೆಗೆ ಆಹ್ವಾನ ಹಾಗೂ ಸನ್ಮಾನಿತರ ಕಿರುಪರಿಚಯವನ್ನು ರವೀಂದ್ರ.ಟಿ ನಡೆಸಿಕೊಟ್ಟರು. ಕಾರ್ಯದರ್ಶಿ ಪ್ರಶಾಂತ್ ಸಿ.ಎಚ್ ಧನ್ಯವಾದ ಸಮರ್ಪಿಸಿದರು.

ವೀಕ್ಷಿಸಿ Subscribers ಮಾಡಿ

 

—ಜಾಹೀರಾತು—

Leave a Reply

You May Have Missed

error: Content is protected !!