ಅಕ್ಕಿ ಸಾಗಾಟದ ಲಾರಿ ಪಲ್ಟಿ: ಜಾರ್ಖಾಂಡ್ ಯುವಕನ ದುರ್ಮರಣ, ಇನ್ನೋರ್ವ ಗಂಭೀರ

Batwala

ಅಕ್ಕಿ ಸಾಗಾಟದ ಲಾರಿ ಪಲ್ಟಿ: ಜಾರ್ಖಾಂಡ್ ಯುವಕನ ದುರ್ಮರಣ, ಇನ್ನೋರ್ವ ಗಂಭೀರ

ಬಂಟ್ವಾಳ: ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ, ಜಾರ್ಖಾಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಿರ್ಮಲಾ ಅನ್ಸಾತ್ (32) ಎಂದು ಗುರುತಿಸಲಾಗಿದ್ದು, ನಿರ್ಮಲಾ ಅನ್ಸಾತ್ ಹಾಗೂ ಆದರ್ಶ್ ಲಾರಿಯ ಹಿಂಬದಿಯಲ್ಲಿ ಅಕ್ಕಿ ಲೋಡ್ ಮೇಲೆ ಕುಳಿತುಕೊಂಡಿದ್ದರೆನ್ನಲಾಗಿದೆ. ಅಪಘಾತದ ವೇಳೆ ರಸ್ತೆಗೆ ಎಸೆಯಲ್ಪಟ್ಟು ನಿರ್ಮಲಾ ಅನ್ಸಾತ್ ಮೃತಪಟ್ಟರೆ, ಆದರ್ಶ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಚಾಲಕ ಸುಜಿತ್ ಹಾಗೂ ಕ್ಲೀನರ್ ಸಿಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡುಬಿದಿರೆ ಮಾರ್ಗವಾಗಿ ಬಂಟ್ವಾಳಕ್ಕೆ ಬರುತ್ತಿದ್ದ ಲಾರಿ ಬಂಟ್ವಾಳದ ಎಸ್.ವಿ.ಎಸ್. ಕಾಲೇಜು ಬಳಿ ಅತಿಯಾದ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  •  

Leave a Reply

You May Have Missed

error: Content is protected !!