ಜೇಸಿಐ ನೆಲ್ಯಾಡಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕಿ ಮಹಿಳೆಗೆ ಸನ್ಮಾನ

ಜೇಸಿಐ ನೆಲ್ಯಾಡಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕಿ ಮಹಿಳೆಗೆ ಸನ್ಮಾನ

ನೇಸರ ಮಾ.8: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಲಯದ ಸುಭಾಷಿಣಿ ಕಾರ್ಯಕ್ರಮದ ಪ್ರಯುಕ್ತ ಸುಮಾರು 25 ವರುಷಗಳಿಂದ ನೆಲ್ಯಾಡಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ದಿವಂಗತ ಮಹಮ್ಮದ್ ಅವರ ಪತ್ನಿ ನೂರ್ ಜಾನ್ ರವರನ್ನು ನೆಲ್ಯಾಡಿಯ ಜೇಸಿಐ ಘಟಕದ ವತಿಯಿಂದ ಇಂದು(ಮಾ.8) ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೆಲ್ಯಾಡಿ ಘಟಕದ ಅಧ್ಯಕ್ಷರಾದ ಜೇಸಿ.ಜಯಂತಿ ಬಿ.ಎಂ ರವರು ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಂಗಾಧರ ಹೊಸಮನೆ, ವಲಯಾಧಿಕಾರಿ ಜೇಸಿ.ಪ್ರಶಾಂತ್ ಸಿ.ಎಚ್, ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಹಾಗೂ ಜೇಸಿಐ ನೆಲ್ಯಾಡಿಯ ಪದಾಧಿಕಾರಿಗಳು, ಸದಸ್ಯರುಗಳು, ಸ್ಥಳೀಯರು ಮೊದಲಾದವರು ಉಪಸ್ಥಿತರಿದ್ದರು. ಅತಿಥಿಗಳನ್ನು ವೇದಿಕೆಗೆ ಆಹ್ವಾನ ಹಾಗೂ ಸನ್ಮಾನಿತರ ಕಿರುಪರಿಚಯವನ್ನು ಜೇಸಿ.ರವೀಂದ್ರ.ಟಿ ನಡೆಸಿ ಕೊಟ್ಟರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

You May Have Missed

error: Content is protected !!