ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹಾಸಭೆ; ನೂತನ ಟ್ರಸ್ಟಿಗಳ ಆಯ್ಕೆ

Nellyadyi

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹಾಸಭೆ; ನೂತನ ಟ್ರಸ್ಟಿಗಳ ಆಯ್ಕೆ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯಕ್ಕೆ ಸೇರಿದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹಾಸಭೆ ಭಕ್ತಿಭಾವದಿಂದ ಹಾಗೂ ಸೌಹಾರ್ದತೆಯಿಂದ ಜರುಗಿತು. ಧರ್ಮಗುರು ವಂ.ಫಾ.ಶಾಜಿ ಮಾತ್ಯು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024-25 ಸಾಲಿನ ಲೆಕ್ಕಪತ್ರಗಳನ್ನು ಓದಿ ಸಭೆಯ ಅನುಮೋದನೆ ಪಡೆಯಲಾಯಿತು.

2025-26 ನೇ ಸಾಲಿನ ನೂತನ ಟ್ರಸ್ಟಿ ಗಳಾಗಿ ಜೋನ್ಸನ್ ಪುಳಿಕ್ಕಲ್, ರೆಜಿ ಕೊಳಂಗರಾತ್ತ್, ಜೋಯ್ ಪುತ್ತೆನ್ ಪರಂಭಿಲ್, ರಾಜೇಶ್ ತೆಕ್ಕನಾಟ್ಟ್ ಅವರನ್ನು ಟ್ರಸ್ಟಿಯಾಗಿ ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ಜೆಸ್ಸಿ ಪುತ್ತೆನ್ ಪುರ ಹಾಗೂ ಅಕೌಂಟೆಂಟ್ ಆಗಿ ಸುರೇಶ್ ಪುನ್ನತ್ತಾನಮ್ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಟ್ರಸ್ಟಿಗಳಿಗೆ ವಂ.ಫಾ. ಶಾಜಿ ಮಾತ್ಯು ಅವರು ಪ್ರಮಾಣವಚನ ಬೋಧಿಸಿ ಧರ್ಮ ಸೇವೆಗೆ ಕರ್ತವ್ಯ ನಿಷ್ಠೆಯಿಂದ ನಿರತರಾಗುವಂತೆ ಉಪದೇಶಿಸಿದರು. ಸಭೆಯಲ್ಲಿ ಹಲವಾರು ಭಕ್ತರು, ಸಮಿತಿಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!