ನೆಲ್ಯಾಡಿ: ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಕತ್ತಿನಿಂದ ಸರವನ್ನು ಎಗರಿಸಿ ಪರಾರಿಯಾದ ಕಳ್ಳರು

Nellyadi

ನೆಲ್ಯಾಡಿ: ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಕತ್ತಿನಿಂದ ಸರವನ್ನು ಎಗರಿಸಿ ಪರಾರಿಯಾದ ಕಳ್ಳರು

ನೆಲ್ಯಾಡಿ: ನೆಲ್ಯಾಡಿ ಗ್ರಾಮದಲ್ಲಿ ಪಡುಬೆಟ್ಟು ಎಂಬಲ್ಲಿ ದಾರಿ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು, ವೃದ್ಧೆಯೊಬ್ಬರ ಕತ್ತಿನಲ್ಲಿದ್ದ 10 ಪವನ್ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿರುವ ಘಟನೆ ಬುಧವಾರದಂದು ಬೆಳಗ್ಗೆ ನಡೆದಿದೆ.

ಪಡುಬೆಟ್ಟಿನ ಅಲಿಮ್ಮ (65) ಎಂಬವರು. ಅವರು ಮನೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ದಾರಿ ಕೇಳುವ ನೆಪದಲ್ಲಿ ಅವರ ಬಳಿ ನಿಂತು ಮಾತುಕತೆ ಆರಂಭಿಸಿದ್ದಾರೆ. ಅವರ ಗಮನ ಬೇರೆಡೆ ಸೆಳೆಯುತ್ತಿದ್ದಂತೆಯೇ ಕತ್ತಿನಲ್ಲಿ ಧರಿಸಿದ್ದ 10 ಪವನ್ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಪರಿಶೀಲನೆ ಸಹ ಪ್ರಾರಂಭಿಸಲಾಗಿದೆ.

  •  

Leave a Reply

You May Have Missed

error: Content is protected !!