ಲಹರಿ ಸಂಗೀತ ಕಲಾಕೇಂದ್ರ ಐಸಿಟಿ ನೆಲ್ಯಾಡಿಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರವೇಶ ಆರಂಭ; ಗ್ರಾಮೀಣ ಪ್ರತಿಭೆಗಳಿಗೆ ಸೌರಭದ ವೇದಿಕೆ

Nellyady

ಲಹರಿ ಸಂಗೀತ ಕಲಾಕೇಂದ್ರ ಐಸಿಟಿ ನೆಲ್ಯಾಡಿಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರವೇಶ ಆರಂಭ; ಗ್ರಾಮೀಣ ಪ್ರತಿಭೆಗಳಿಗೆ ಸೌರಭದ ವೇದಿಕೆ

ನೆಲ್ಯಾಡಿ: ಕಲಾಪ್ರಿಯ ವಿದ್ಯಾರ್ಥಿಗಳಲ್ಲಿ ಸಂಗೀತಾಭಿವೃದ್ಧಿಗೆ ಮುಂಚೂಣಿಯಲ್ಲಿರುವ ಲಹರಿ ಸಂಗೀತ ಕಲಾಕೇಂದ್ರ ಐಸಿಟಿ ನೆಲ್ಯಾಡಿ, ಕಳೆದ ಮೂರು ವರ್ಷಗಳಿಂದ ಸುಗಮ ಸಂಗೀತ, ಕೀಬೋರ್ಡ್, ಹಾರ್ಮೋನಿಯಂ ಹಾಗೂ ಭಜನಾ ತರಗತಿಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದೀಗ ಸಂಸ್ಥೆಯ ನಾಲ್ಕನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ.

ಇಲ್ಲಿ ಕಲಾಸಕ್ತ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ, ಭಜನೆ, ಭಾವಗೀತೆ, ಚಿತ್ರಗೀತೆಗಳ ಗಾಯನ ತರಬೇತಿ ನೀಡಲಾಗುತ್ತಿದ್ದು, ಹಾರ್ಮೋನಿಯಂ ನುಡಿಸಿಕೊಂಡು ಹಾಡುವುದು ಹಾಗೂ ಕೀಬೋರ್ಡ್ ನುಡಿಸುವ ಕೌಶಲ್ಯವನ್ನು ಕಲಿಸುವುದರೊಂದಿಗೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಸಿದ್ಧ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ನಟನೆ ಹಾಗೂ ಗಾಯನಕ್ಕೆ ಉತ್ತಮ ವೇದಿಕೆ ಒದಗಿಸಲಾಗುತ್ತಿದೆ.

ಈ ಕಲಾಕೇಂದ್ರದಲ್ಲಿ ಕೀಬೋರ್ಡ್ ನುಡಿಸುವ ಕಲಿಕೆಯನ್ನು ಪಡೆದ ಹಲವು ವಿದ್ಯಾರ್ಥಿಗಳು ಭವಿಷ್ಯದಲ್ಲಿ ವೃತ್ತಿಪರ ಕಲಾವಿದರಾಗುವತ್ತ ನಿಗದಿತ ಹೆಜ್ಜೆ ಇಡುತ್ತಿದ್ದಾರೆ. ಈವರೆಗೆ ಸಂಸ್ಥೆಯ ಲಹರಿ ಸಂಗೀತ ತಂಡವು ಜಿಲ್ಲೆಯ ಅನೇಕ ಪ್ರಸಿದ್ಧ ವೇದಿಕೆಗಳು ಸೇರಿದಂತೆ ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬದಂತಹ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ “ಸಂಗೀತ ರಸಮಂಜರಿ”, ನೃತ್ಯ ಕಾರ್ಯಕ್ರಮಗಳು ಹಾಗೂ ‘ನಗಬೇಕು ಆಗಾಗ ಬದುಕಿನೊಳಗೆ’ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನೀಡಿದ್ದು ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಗೆ ಬೆಳಕು ನೀಡುವ ಗುರಿಯನ್ನು ಹೊಂದಿರುವ ಲಹರಿ ಸಂಗೀತ ಕಲಾಕೇಂದ್ರ ಸದಾ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಶನಿವಾರ ಮಧ್ಯಾಹ್ನ ನಂತರ ಹಾಗೂ ಆದಿತ್ಯವಾರದಂದು ಕೀಬೋರ್ಡ್ ಮತ್ತು ಸುಗಮ ಸಂಗೀತ ತರಗತಿಗಳು ನಡೆಯುತ್ತಿದ್ದು, ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತರಬೇತಿ ಪಡೆಯುತ್ತಿದ್ದಾರೆ.

ತರಗತಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ಮೊಬೈಲ್: 9741132215 ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

  •  

Leave a Reply

You May Have Missed

error: Content is protected !!