ಕಡಬ ಲಯನ್ಸ್ ಕ್ಲಬ್ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.1 ಲಕ್ಷ ಅನುದಾನ ಮಂಜೂರು

Kadaba

ಕಡಬ ಲಯನ್ಸ್ ಕ್ಲಬ್ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.1 ಲಕ್ಷ ಅನುದಾನ ಮಂಜೂರು

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಡಬದ ಲಯನ್ಸ್ ಕ್ಲಬ್ ಕಟ್ಟಡ ಅಭಿವೃದ್ಧಿಗೆ ರೂ.1 ಲಕ್ಷದ ಅನುದಾನ ಮಂಜೂರಾಗಿದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಹಾಯ ಧನವನ್ನು ಘೋಷಿಸಿದ್ದಾರೆ.

ಈ ಕುರಿತು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕಡಬ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಲಯನ್ಸ್ ಕ್ಲಬ್ ಅಧ್ಯಕ್ಷ ಪಿಲೋಮೀನ ಸ್ಕರಿಯರ್ ಅವರಿಗೆ ಅನುಮೋದನಾ ಪತ್ರವನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳ ಜೊತೆಗೆ ಕಡಬ ವಲಯ ಒಕ್ಕೂಟ ಅಧ್ಯಕ್ಷ ರಮೇಶ್ ರೈ ಅರ್ಪಜೆ, ಅಡ್ಡಗದ್ದೆ ಒಕ್ಕೂಟದ ಅಧ್ಯಕ್ಷರು, ವಿವಿಧ ಒಕ್ಕೂಟಗಳ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್, ಸೇವಾಪ್ರತಿನಿಧಿ ನಳಿನಿ ಉಪಸ್ಥಿತರಿದ್ದರು.

  •  
Previous post

ಲಹರಿ ಸಂಗೀತ ಕಲಾಕೇಂದ್ರ ಐಸಿಟಿ ನೆಲ್ಯಾಡಿಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರವೇಶ ಆರಂಭ; ಗ್ರಾಮೀಣ ಪ್ರತಿಭೆಗಳಿಗೆ ಸೌರಭದ ವೇದಿಕೆ

Next post

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ – “ನಗಬೇಕು ಆಗಾಗ ಬದುಕಿನೊಳಗೆ”

Leave a Reply

You May Have Missed

error: Content is protected !!