ಸೌತಡ್ಕ ಸಂರಕ್ಷಣಾ ಸಮಿತಿ ನೂತನ ಅಧ್ಯಕ್ಷರಾಗಿ ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು ಆಯ್ಕೆ

Kokkada

ಸೌತಡ್ಕ ಸಂರಕ್ಷಣಾ ಸಮಿತಿ ನೂತನ ಅಧ್ಯಕ್ಷರಾಗಿ ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು ಆಯ್ಕೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ಸಭೆಯು ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ನಡೆಯಿತು.

ಈ ಹಿಂದೆ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದ ಸುಬ್ರಹ್ಮಣ್ಯ ಶಬರಾಯ ಅವರು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನಾಗಿ ಪ್ರಸ್ತುತ ಸಮಿತಿಯ ಉಪಾಧ್ಯಕ್ಷರಾಗಿರುವ ಮತ್ತು ಸೌತಡ್ಕ ದೇಗುಲದ ಅಭಿವೃದ್ದಿಗೆ ನಿರಂತರಶ್ರಮಿಸುತ್ತಿರುವ ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು ಇವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಸುಬ್ರಹ್ಮಣ್ಯ ಶಬರಾಯ ಅವರನ್ನು ಸಮಿತಿಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು. ದೇಗುಲದ ಬಳಕೆಗಾಗಿ ಕಳೆದ 20 ವರ್ಷಗಳ ಹಿಂದೆ ಖರೀದಿಸಲಾಗಿದ್ದ ಜಮೀನನ್ನು ಖಾಸಗಿ ಟ್ರಸ್ಟ್ ಸ್ವಾಧೀನ ಮಾಡಿಕೊಂಡಿದ್ದು, ಇದನ್ನು ಮರಳಿ ದೇಗುಲಕ್ಕೇ ಸಿಗುವಂತೆ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರಶಾಂತ್ ರೈ ಅವರು ಮುಂಚೂಣಿಯಲ್ಲಿ ಶ್ರಮಿಸಿದವರು ಹಾಗೂ ಸೌತಡ್ಕ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ಈ ಹಿಂದೆ ಸೇವ ಸಲ್ಲಿಸಿದವರಾಗಿದ್ದಾರೆ ಹಾಗಾಗಿ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಸದಸ್ಯರು ಸಭೆಯಲ್ಲಿ ತಿಳಿಸಿದರು.

  •  

Leave a Reply

You May Have Missed

error: Content is protected !!