ಕಾಪಿನಬಾಗಿಲು: ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ

Nellyadi

ಕಾಪಿನಬಾಗಿಲು: ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ಶ್ರೀನಿವಾಸ ಆಚಾರ್ಯ(70) ಎಂಬವರು ಅಮಲು ಪದಾರ್ಥ ತಂದುಕೊಡಲಿಲ್ಲವೆಂದು ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಮೃತರು ಅಮಲು ಪದಾರ್ಥ ಸೇವಿಸುವ ದೀರ್ಘಕಾಲದ ಚಟ ಹೊಂದಿದ್ದ ಶ್ರೀನಿವಾಸ ಆಚಾರ್ಯ ಅವರು ಜೂ.12 ರಂದು ಸಂಜೆ 6 ಗಂಟೆಗೆ ಮನೆಯಿಂದ ಹೊರನಡೆದ ಅವರು, ರಾತ್ರಿಯಾದರೂ ಮನೆಗೆ ಮರಳದೆ ಕಾಣೆಯಾಗಿದ್ದರು. ಅವರಿಗಾಗಿ ಹುಡುಕಾಟ ಆರಂಭಿಸಿದ ಕುಟುಂಬಸ್ಥರು ಮನೆಯ ಸಮೀಪದಲ್ಲಿರುವ ಆವರಣವಿಲ್ಲದ ಬಾವಿಯ ಬಳಿ ತೆರಳಿದಾಗ, ಅಲ್ಲಿ ಅವರ ಕನ್ನಡಕ ಹಾಗೂ ಬೈರಸ್ ಪತ್ತೆಯಾಯಿತು. ಬಾವಿಯೊಳಗೆ ಟಾರ್ಚ್‌ಲೈಟ್‌ ಹಾಕಿ ಪರಿಶೀಲಿಸಿದರೂ ಅದೇ ರಾತ್ರಿ ಯಾವ ಮಾಹಿತಿಯೂ ಲಭಿಸಿರಲಿಲ್ಲ. ಆದರೆ ಮರುದಿನ ಜೂ.13ರ ಬೆಳಿಗ್ಗೆ, ಪುನಃ ಪರಿಶೀಲನೆ ನಡೆಸಿದಾಗ ಬಾವಿಯೊಳಗೆ ಶ್ರೀನಿವಾಸ ಆಚಾರ್ಯ ಅವರ ಮೃತದೇಹ ಪತ್ತೆಯಾಯಿತು.

ಈ ಕುರಿತು ಮೃತರ ಪುತ್ರ ಶ್ರೀಕಾಂತ ಆಚಾರ್ಯ ಅವರು ದೂರು ನೀಡಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

  •  
Previous post

ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ವಾರ್ಷಿಕ ಮಹಾಸಭೆ – ಉಚಿತ ಪುಸ್ತಕ ವಿತರಣೆ | ಪ್ರತಿಭಾ ಪುರಸ್ಕಾರ

Next post

ಸೌತಡ್ಕ ಸಂರಕ್ಷಣಾ ಸಮಿತಿ ನೂತನ ಅಧ್ಯಕ್ಷರಾಗಿ ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು ಆಯ್ಕೆ

Leave a Reply

You May Have Missed

error: Content is protected !!