ಶಿಬರಾಜೆ ಪರಪ್ಪು ಭಜನಾ ಮಂದಿರದಲ್ಲಿ ಕುಣಿತ ಭಜನಾ ತರಬೇತಿ ಶಿಬಿರ

Kokkada

ಶಿಬರಾಜೆ ಪರಪ್ಪು ಭಜನಾ ಮಂದಿರದಲ್ಲಿ ಕುಣಿತ ಭಜನಾ ತರಬೇತಿ ಶಿಬಿರ

ಕೊಕ್ಕಡ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ(ರಿ)ಶಿಬರಾಜೆ ಪರಪ್ಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ ಸಿ ಟ್ರಸ್ಟ್ ಬೆಳ್ತಂಗಡಿ ಹಾಗೂ ಭಜನಾ ಪರಿಷತ್ ಇವುಗಳ ಸಹಯೋಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಪರಪ್ಪು ಇಲ್ಲಿ”ಕುಣಿತ ಭಜನಾ ತರಬೇತಿ” ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕ್ಷೇಮಪಾಲನ ಅಧಿಕಾರಿ ಯುವರಾಜ ಪೂವಣಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ “ಭಜನೆ ಭಕ್ತಿಯ ಮೂಲಕ ಮನಸ್ಸಿಗೆ ಶಾಂತಿ, ಸಮುದಾಯಕ್ಕೆ ಏಕತೆ, ಮತ್ತು ಸಂಸ್ಕೃತಿಗೆ ಜೀವಹೂರಣ” ಎಂದು ಹೇಳಿರು.

ವೇದಿಕೆಯಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಸಾಲಿಯನ್, ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಸೀಮುಳ್ಳು, ಭಜನಾ ಪರಿಷತ್ ರಾಜ್ಯ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಇದರ ಯೋಜನಾಧಿಕಾರಿ ಯಶೋಧರ್ ಕೆ, ಭಜನಾ ಪರಿಷತ್ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಹರೀಶ್, ಪರಪ್ಪುಗುತ್ತು ಜಿನೇಂದ್ರ ಜೈನ್, ಕಳೆಂಜ ಗ್ರಾ. ಪಂ. ಸದಸ್ಯ ನಿತ್ಯಾನಂದ ರೈ, ಭಜನಾ ತರಬೇತುದಾರರಾದ ಸಂದೇಶ ಸುವರ್ಣ ಹಾಗೂ ನಾಗೇಶ ಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ರವೀಂದ್ರ ಬಿ. ನಿತ್ಯಾನಂದ ರೈ, ನಿಡ್ಲೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ ವಳಚ್ಚಿಲ್, ಎಲ್ ಡಿ ಬ್ಯಾಂಕ್ ನಿರ್ದೇಶಕ ಸಂತೋಷ್ ಕುಮಾರ್ ಜೈನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಕುಮಾರಿ ವೇದಿಕ, ಅನುಪ್ರಿಯಾ ಹಾಗೂ ಅದಿತಿ ಪ್ರಾರ್ಥಿಸಿದರು, ಕುಮಾರಿ ಛಾಯ ಸ್ವಾಗತಿಸಿದರು, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.

  •  

Leave a Reply

You May Have Missed

error: Content is protected !!