ಜಯರಾಮ ನೆಲ್ಲಿತ್ತಾಯ ಸಮಾಜದ ಆಸ್ತಿ: ರಾಜಾರಾಮ ಪೊಲ್ನಾಯ

Shibaje

ಜಯರಾಮ ನೆಲ್ಲಿತ್ತಾಯ ಸಮಾಜದ ಆಸ್ತಿ: ರಾಜಾರಾಮ ಪೊಲ್ನಾಯ

ಶಿಬಾಜೆ: “ಜಯರಾಮ ನೆಲ್ಲಿತ್ತಾಯ ನಮ್ಮ ಸಮಾಜದ ಆಸ್ತಿ” ಎಂದು ಬೆಳ್ತಂಗಡಿ ತಾಲೂಕು ಶಿವಳ್ಳಿ ಸಮಾಜದ ಅಧ್ಯಕ್ಷರಾದ ರಾಜಾರಾಮ ಪೊಲ್ನಾಯ ಅವರು ಅಭಿಪ್ರಾಯಪಟ್ಟರು. ಕಳೆದ 41 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಜಯರಾಮ ನೆಲ್ಲಿತ್ತಾಯ ಅವರ ಸೇವೆ ಸರಳವಾಗಿ ಪ್ರಶಂಸನೀಯವಾಗಿದೆ. ಅವರ ಯೋಜನೆ ಮತ್ತು ಯೋಚನೆಗಳು ಇನ್ನು ಮುಂದೆ ಕೂಡ ಸಮಾಜಕ್ಕೆ ಪಾಠವಾಗಲೆಂದು ಬೆಳ್ತಂಗಡಿ ತಾಲೂಕು ಶಿವಳ್ಳಿ ಸಮಾಜದ ಅಧ್ಯಕ್ಷ ರಾಜಾರಾಮ ಪೊಲ್ನಾಯ ತಿಳಿಸಿದರು.

ಶಿಬಾಜೆ ಗ್ರಾಮದ ಪುರಂದರ ರಾವ್ ಅವರ ಮನೆಯಲ್ಲಿ ನಡೆದ ವಲಯ ಶಿವಳ್ಳಿ ಭಾಂದವರ ವತಿಯಿಂದ ನಡೆದ ವಿಶೇಷ ಅಭಿನಂದನಾ ಕಾರ್ಯಕ್ರಮದಲ್ಲಿ ಜಯರಾಮ ನೆಲ್ಲಿತ್ತಾಯ ಮತ್ತು ರೇಖಾ ನೆಲ್ಲಿತ್ತಾಯ ದಂಪತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ವಲಯ ಅಧ್ಯಕ್ಷರಾದ ಪುರಂದರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ “ದಣಿವರಿಯದ ಕಾಯಕ ಅವರು ಮಾಡಿದ್ದು, ಇಂತಹ ಸೇವಾಭಾವ ಸಮಾಜಕ್ಕೆ ದಾರಿ ತೋರಿಸುತ್ತದೆ. ಅವರ ಮುಂದಿನ ಸೇವೆಗೂ ನಮ್ಮೆಲ್ಲರ ಸಹಕಾರವಿರಲಿದೆ” ಎಂದರು.

ವೇದಿಕೆಯಲ್ಲಿ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ, ಭಾಸ್ಕರ ರಾವ್ ಮುಂಡುಪ್ಪಾಡಿ, ತಾಲ್ಲೂಕು ಮಹಿಳಾ ಪದಾಧಿಕಾರಿಗಳಾದ ಜಯಾ, ಅಕ್ಷತಾ, ಗಿರೀಶ ಕುದುರೆತ್ತಾಯ ಧರ್ಮಸ್ಥಳ, ಲಕ್ಮೀನಾರಾಯಣ ನಿಡ್ಲೆ, ಜಿಲ್ಲಾಧ್ಯಕ್ಷ ಡಾ.ದಯಾಕರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸುಧೀರ ರಾವ್ ಅಡ್ಕಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳೀಕೃಷ್ಣ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ಶ್ರೀಕರ ರಾವ್ ಅಭಿನಂದನಾ ಪತ್ರ ವಾಚಿಸಿದರು. ಮೋಹನ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು, ಗಿರೀಶ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯಾ ಸೇರಿದಂತೆ ಹಲವು ಗ್ರಾಮಗಳಿಂದ ಸಮಾಜದ ಭಾಂದವರು ಭಾಗವಹಿಸಿದ್ದರು. ಬಳಿಕ ಮಂಗಳೂರು ಭ್ರಾಮರಿ ಮಹಿಳಾ ಯಕ್ಷಗಾನ ತಂಡದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು

  •  

Leave a Reply

You May Have Missed

error: Content is protected !!