ಶಿಶಿಲದಲ್ಲಿ ದನದ ಹಟ್ಟಿಗೆ ಬಿದ್ದ ಮರ: ಶೌರ್ಯ ತಂಡದಿಂದ ತಕ್ಷಣದ ನೆರವು

Shishila

ಶಿಶಿಲದಲ್ಲಿ ದನದ ಹಟ್ಟಿಗೆ ಬಿದ್ದ ಮರ: ಶೌರ್ಯ ತಂಡದಿಂದ ತಕ್ಷಣದ ನೆರವು

ಶಿಶಿಲ: ಶಿಶಿಲ ಗ್ರಾಮದ ಅಡ್ಡಹಳ್ಳದಲ್ಲಿ ಯೋಗೀಶ್ ದಾಮಲೆ ಅವರ ದನದ ಹಟ್ಟಿಗೆ ಮರವೊಂದು ಧರೆಗುರುಳಿ ಬಿದ್ದ ಪರಿಣಾಮ, ಹಟ್ಟಿಯ ಛಾವಣಿಗೆ ಭಾಗಶಃ ಹಾನಿಯಾಗಿದ್ದು, ಹತ್ತಿರವಿದ್ದ ವಿದ್ಯುತ್ ಕಂಬ ಹಾಗೂ ತಂತಿಗಳು ಸಹ ಹಾನಿಗೊಂಡಿವೆ.

ಘಟನೆಯ ತೀವ್ರತೆಯನ್ನು ಮನಗಂಡ ಮನೆಯವರ ಕರೆಗೆ ತಕ್ಷಣ ಸ್ಪಂದಿಸಿದ ಶೌರ್ಯ ಸ್ವಯಂಸೇವಕರಾದ ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಾಧಾಕೃಷ್ಣ ಗುತ್ತು ಮತ್ತು ರಮೇಶ ಬೈರಕಟ್ಟ ಅವರುಗಳು ಸ್ಥಳೀಯ ಗ್ರಾ.ಪಂ ಹಾಗೂ ಪವರ್ ಮ್ಯಾನ್‌ಗಳಿಗೆ ಮಾಹಿತಿ ನೀಡಿ ವಿದ್ಯುತ್‌ ಸರಬರಾಜನ್ನು ಸ್ಥಗಿತಗೊಳಿಸಿದರು. ನಂತರ ಮರವನ್ನು ಸುರಕ್ಷಿತವಾಗಿ ತೆರವುಗೊಳಿಸಿ, ಛಾವಣಿಯಿಂದ ಸೋರುತ್ತಿದ್ದ ಸ್ಥಳಕ್ಕೆ ತಾತ್ಕಾಲಿಕ ಟಾರ್ಪಲ್‌ ಹೊದಿಸಿದರು.

ಸ್ಥಳೀಯರಾದ ರಾಧಾಕೃಷ್ಣ ದಾಮಲೆ , ಗೌರಿ ಹಾಗೂ ಸುನಿಲ್ ಗೋಖಲೆ ಸಹಕರಿಸಿದರು.

  •  

Leave a Reply

You May Have Missed

error: Content is protected !!