ಶಿಶಿಲದಲ್ಲಿ ವರುಣನ ಆರ್ಭಟ ಶಿಶಿಲೇಶ್ವರ ದೇವಸ್ಥಾನ ಜಲಾವೃತ, ಗರ್ಭಗುಡಿಗೆ ನುಗ್ಗಿದ ನೀರು

Shishila

ಶಿಶಿಲದಲ್ಲಿ ವರುಣನ ಆರ್ಭಟ ಶಿಶಿಲೇಶ್ವರ ದೇವಸ್ಥಾನ ಜಲಾವೃತ, ಗರ್ಭಗುಡಿಗೆ ನುಗ್ಗಿದ ನೀರು

ಶಿಶಿಲ: ಮಳೆಗಾಲದ ಆರಂಭದಲ್ಲೇ ವರುಣನ ಅಬ್ಬರ ಶಿಶಿಲದಲ್ಲಿ ತೀವ್ರ ರೂಪ ಪಡೆದಿದ್ದು, ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿರುವ ಘಟನೆ ಭಯಭೀತಿಯನ್ನು ಉಂಟುಮಾಡಿದೆ. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಪಿಲಾ ನದಿಯಲ್ಲಿ ಉಂಟಾದ ಪ್ರವಾಹ ದೇವಸ್ಥಾನದ ಒಳಗೆ ನುಗ್ಗಿ, ಪವಿತ್ರ ಗರ್ಭಗುಡಿಗೂ ಪ್ರವೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೇವಳದ ಪಕ್ಕದಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ದೇವಾಲಯದ ಸಂಪರ್ಕಮಾರ್ಗವಾಗಿರುವ ಕಿಂಡಿ ಆಣೆಕಟ್ಟಿನು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸದ್ಯಕ್ಕೆ ತೂಗುಸೇತುವೆಯವರೆಗೂ ನೀರು ಹರಿಯುತ್ತಿದೆ. ಪ್ರವಾಹದ ವೇಗ ಹಾಗೂ ಮಟ್ಟವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

“ಪ್ರವಾಹದ ಕಾರಣದಿಂದ ಜನರು ದೇವಳದ ದರ್ಶನಕ್ಕೂ ಹೋಗಲಾರದೇ, ಜೀವನೋಪಾಯಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾ.ಪಂ ಹಾಗೂ ಸ್ಥಳೀಯ ಸಂಘಟನೆಗಳು ಭದ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ” ಎಂದು ಗ್ರಾ.ಪಂ ಅಧ್ಯಕ್ಷ ಸುಧೀನ್ ಡಿ ತಿಳಿಸಿದರು.

  •  

Leave a Reply

You May Have Missed

error: Content is protected !!